ಬಂಟ್ವಾಳ: ಫರಂಗಿಪೇಟೆಯ ಸೂಪರ್ ಮಾರ್ಕೆಟ್ ನಿಂದ ಕಳವುಗೈದ ಸೊತ್ತುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಮಂಗಳೂರಿನ ಬೆಂಗ್ರ ಕಸ್ಬಾ ನಿವಾಸಿ ಮಹಮ್ಮದ್ ಅನ್ಸಾರ್ ಬಂಧಿತ ಆರೋಪಿಯಾಗಿದ್ದಾನೆ.ಆ.25 ರಂದು ಫರಂಗಿಪೇಟೆ ಸೂಪರ್ ಮಾರ್ಕೆಟ್ ನಲ್ಲಿ ಸುಮಾರು 25 ಸಾ.ರೂ.ಮೌಲ್ಯದ ದಿನಸಿ ವಸ್ತುಗಳ ಸಹಿತ ನಗದನ್ನು ಕಳವುಗುಯದಿದ್ದನೆನ್ನಲಾಗಿದ್ದು,ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಕಳವುಗೈದಿದ್ದ ಈ ಸೊತ್ತುಗಳನ್ನು ಆರೋಪಿ ತುಂಬೆ ರಾಮಲ್ ಕಟ್ಟೆಯ ಅಂಗಡಿಯೊಂದಕ್ಕೆ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯನ್ವಯ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಸಂಜೀವ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೊತ್ತು ವಶಪಡಿಸಿ,ಆರೋಪಿಯನ್ನು ಬಂಧಿಸಿದ್ದಾರೆ.
