ಬಂಟ್ವಾಳ: 2020-21 ನೇ ಸಾಲಿನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮಾಹಿತಿ ಕಾರ್ಯಾಗಾರ ವಿಟ್ಲ ಗಜಾನನ ಮಿನಿಹಾಲ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕರಾದ   ಭಾನು ಪ್ರಕಾಶ್ ರವರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಗ್ಗೆ( PR ) ನೇಮಕಗೊಂಡ ಖಾಸಗಿ ನಿವಾಸಿಗಳಿಗೆ ಮೊಬೈಲ್ ಆ್ಯಪ್ ಕಾರ್ಯದ ಬಗ್ಗೆ ವಿವರವಾಗಿ ತಿಳಿಸಿದರು.ced60644-a2d8-4894-9267-d888867444b0

ಈ ಸಂದರ್ಭದಲ್ಲಿ ತರಬೇತಿ ಕಾರ್ಯಕ್ಕೆ ಹಾಜರಾಗಿದ್ದ, ಖಾಸಗಿ ನಿವಾಸಿಗಳು (PR) ಮೊಬೈಲ್ ಆ್ಯಪ್ ನಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಆದಷ್ಟೂ ಶೀಘ್ರ ಪರಿಹರಿಸಿ ಎಂಬುವುದಾಗಿ ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ರವರು ಬೆಳೆ ಸಮೀಕ್ಷೆ ನಡೆಸುವ ಖಾಸಗಿ ನಿವಾಸಿಗಳು, ಸರಕಾರದ ವತಿಯಿಂದ ನೀಡಲ್ಪಡುವ ಗೌರವಧನದ ಜೊತೆಗೆ ಇಲಾಖೆಯೊಂದಿಗೆ ಸೇವಾ ಮನೋಭಾವ ಬೆಳೆಸಿ ಬೆಳೆ ಸಮೀಕ್ಷೆ ಕೆಲಸ ಯಶಸ್ವಿಯಾಗಿ ನಿರ್ವಹಿಸುವಂತೆ ಹಾರೈಸಿದರು.81f86982-5944-431d-b8c9-9f04c93ce477

ಕಾರ್ಯಕ್ರಮದಲ್ಲಿ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ದಿನೇಶ್, ಸಹಾಯಕ ಕೃಷಿ ನಿರ್ದೇಶಕರಾದ ನಾರಾಯಣ ಶೆಟ್ಟಿ, ವಿಟ್ಲ RI ದಿವಾಕರ್ ಯಂ, ವಿಟ್ಲ ಹೋಬಳಿಯ ಎಲ್ಲಾ ಗ್ರಾಮಕರಣಿಕರು, ಗ್ರಾಮಸಹಾಯಕರು ಭಾಗವಹಿಸಿದರು.

ವಿಟ್ಲ ಹೋಬಳಿ ಕೃಷಿ ಅಧಿಕಾರಿ ಸರಿಕಾರ್, ಕಾರ್ಯಕ್ರಮ ನಿರ್ವಹಿಸಿದರು, ಕೊಳ್ನಾಡು VA ಅನಿಲ್ ಕುಮಾರ್ ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *