ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ತೆಂಕ ಬೆಳ್ಳೂರು ಗ್ರಾಮ ಸಮಿತಿಯ ವತಿಯಿಂದ  ಸೆ. 6ರಂದು  ಭಾನುವಾರ ಆಯುಷ್ಮನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷ  ಬಿ. ದೇವಪ್ಪ ಪೂಜಾರಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಸಾಮಾನ್ಯ ಕಾರ್ಯಕರ್ತ ಬಡತನದಿಂದ ಬೆಳೆದ ದೇವಪ್ಪ ಪೂಜಾರಿಯವರು ಪಕ್ಷದ ನಿಷ್ಠೆ, ಪ್ರಾಮಾಣಿಕತೆಗೆ ಸಿಕ್ಕಿದ ಜಾವಬ್ದಾರಿಯನ್ನು ನಮ್ಮ ಗ್ರಾಮಕ್ಕೆ ಹೆಮ್ಮೆ ತಂದಿದೆ ಎಂದು ಸಜಿಪ ಮುನ್ನೂರು ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ಅಭಿನಂದಾನ ಭಾಷಣದಲ್ಲಿ ತಿಳಿಸಿದರು.

ea37840d-57ba-4bcb-90d5-24b6bf56b82a
ಈ ಸಂದರ್ಭದಲ್ಲಿ ಮಾತಾಡಿದ ಶ್ರೀ ದೇವಪ್ಪ ಪೂಜಾರಿಯವರು ನನಗೆ ಪಕ್ಷ ಕಟ್ಟುವ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು ಪಕ್ಷವನ್ನು ತೆಂಕಬೆಳ್ಳೂರು ಗ್ರಾಮದಲ್ಲಿ ಇನ್ನಷ್ಟು ಬೆಳೆಸಬೇಕು. ತೆಂಕ ಬೆಳ್ಳೂರು ಗ್ರಾಮ ಸಮಿತಿಯ ವತಿಯ ಆಯುಷ್ಮನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಮುಖ್ಯಮಂತ್ರಿ ಬಿ.ಯೇಸ್. ಯೂಡಿಯುರಪ್ಪರ ಬಡವರ ಪರ ಇರುವ ಯೋಜನೆಗಳನ್ನು ಭಾರತೀಯ ಜನಾತ ಪಕ್ಷದ ತೆಂಕಬೆಳ್ಳೂರು ಗ್ರಾಮ ಸಮೀತಿಯ ಕಾರ್ಯಕರ್ತರು ಮನೆಮನೆಗೆ ತಲುಪಿಸಿ ಬಡವರಿಗೆ, ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ಸಿಗುವ ಹಾಗೆ ನೋಡಿಕೋಳ್ಳಬೇಕು ಎಂದು ವಿನಂತಿ ಮಾಡಿಕೊಂಡರು. ಆಯುಷ್ಮನ್ ಕಾರ್ಡ್ ಅಭಿಯಾನದ ನಡುವೆ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಆಗಮಿಸಿ ಆಯುಷ್ಮನ್ ಕಾರ್ಡ್ ಅಭಿಯಾನಕ್ಕೆ ನೇರೆದಿರುವ ಗ್ರಾಮದ ಜನರೋಂದಿಗೆ ಬೆರೆತು ಶುಭ ಹಾರೈಸಿದರು.

7056a138-bf46-4de8-9ffd-8643cd828700
ಈ ಸಂದರ್ಭದಲ್ಲಿ ಕ್ಷೇತ್ರದ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಾವತಿ, ಕ್ಷೇತ್ರದ ಯುವ ಮೋರ್ಚದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು, ಸಜಿಪ ಮೂನ್ನುರು ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು, ಜಿಲ್ಲಾ ಯುವಮೊರ್ಚದ ಕಾರ್ಯಕಾರಿಣಿ ಸದಸ್ಯ ಕಿಶೋರ್ ಪಲ್ಲಿಪಾಡಿ, ಸಜಿಪ ಮೂನ್ನುರು ಮಹಾಶಕ್ತಿ ಕೇಂದ್ರದ ಮಹಿಳಾ ಪ್ರತಿನಿದಿ ರೂಪಾನಾರಯಣ್ ನಾಯ್ಕ್, ತೆಂಕಬೆಳ್ಳೂರು ಗ್ರಾಮ ಸಮಿತಿಯ ಅಧ್ಯಕ್ಷ ತಿರುಮಲೇಶ್ ಬೆಳ್ಳೂರು ಉಪಸ್ಥಿತರಿದ್ದರು. ತಿರುಲೇಶ್ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *