ಗುರುಪುರ ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 87.23 ಫಲಿತಾಂಶ
ಕುಪ್ಪೆಪದವು: ಗುರುಪುರ ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 87.23 ಫಲಿತಾಂಶ ಬಂದಿದೆ. ಒಟ್ಟು 47 ವಿದ್ಯಾರ್ಥಿಗಳು ಪರೀಕ್ಷೆ ಪರೀಕ್ಷೆ ಹಾಜರಾಗಿದ್ದು, ಏಳು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ ಹಾಗೂ 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
590 ಅಂಕ ಗಳಿಸಿದ ಪವನ್ ಶಾಲೆಗೆ ಪ್ರಥಮ ಬಂದಿದ್ದು, ಪ್ರತೀಕ್(581) ಮತ್ತು ಸ್ವಾತಿ(579) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.
ಸರಕಾರಿ ಪ್ರೌಢಶಾಲೆ ಕಲ್ಲಾಡಿ : ಪರೀಕ್ಷೆಗೆ ಹಾಜರಾದ ಒಟ್ಟು 15 ವಿದ್ಯಾರ್ಥಿಗಳಲ್ಲಿ ಯಶ್ವಿನಿ (569)91.04 ಶೇಕಡಾ ಅಂಕ ಮತ್ತು ಧನುಷ್(544)87.04ಶೇಕಡಾ ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದರೆ ಪ್ರಥಮ ದರ್ಜೆಯಲ್ಲಿ 06 ಮತ್ತು ದ್ವಿತೀಯ ದರ್ಜೆಯಲ್ಲಿ ಇಬ್ಬರು ಉತ್ತೀರ್ಣರಾಗುವ ಮೂಲಕ ಒಟ್ಟಾರೆ 63.06%ಫಲಿತಾಂಶ ದಾಖಲಿಸಿದ್ದಾರೆ.