-
ಬಜ್ಪೆ: ಬಜ್ಪೆ ಮುಂಡಾರುಗೆ ಸಮೀಪದ ಕಳವಾರು ರಸ್ತೆ ಬದಿಯ ಗುಡ್ಡದಿಂದ ಅವ್ಯಾಹತ ಅಕ್ರಮ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಸತತ ಮಳೆಯಿಂದ ಮಣ್ಣು ತೆಗೆಯಲಾದ ಭಾಗದಲ್ಲಿ ಗುಡ್ಡ ಕುಸಿಯುತ್ತಲೇ ಹತ್ತಿರದ ರುದ್ರಭೂಮಿಗೆ ಅಪಾಯ ಎದುರಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿವೆ.

ಈ ಅಕ್ರಮದ ವಿರುದ್ಧ ಧ್ವನಿ ಎತ್ತಿ ಎತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮುಖಂಡರು ಬಜ್ಪೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಸಾಯೀಶ್ ಚೌಟರಿಗೆ ಮನವಿ ಸಲ್ಲಿಸಿ, ಅಕ್ರಮ ತಡೆಯುವಂತೆ ಕೋರಿದ್ದಾರೆ.
ಅಕ್ರಮ ಮಣ್ಣುಗಾರಿಕೆ ತಡೆಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಭರವಸೆ ನೀಡಿದರು. ನಿಯೋಗದಲ್ಲಿ ವಿಹಿಂಪ ಪ್ರಖಂಡ ಕಾರ್ಯದರ್ಶಿ ಸುನಿಲ್ ಪೆರಾರ, ಪಂಚಾಯತ್ ಬಜರಂಗ ದಳ ಸಂಚಾಲಕ ರವಿ ಸುವರ್ಣ, ಪ್ರಖಂಡ ಸೇವಾ ಪ್ರಮುಖ ದಿನೇಶ್ ಮಿಜಾರ್, ಬಜ್ಪೆ ವಲಯವಿಹಿಂಪ ಅಧ್ಯಕ್ಷ ರಮೇಶ್ ಶೆಟ್ಟಿ ಬಜ್ಪೆ, ದುರ್ಗಾಪ್ರಸಾದ ಕೋಟ್ಯಾನ್, ಬಜ್ಪೆ ಬಜರಂಗ ದಳ ಸಂಚಾಲಕ ಅಭಿಷೇಕ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
