ಬಂಟ್ವಾಳ:  ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಯುತ್ತಿರುವ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

IMG-20200806-WA0032ಈ ಅಪಾಯಕಾರಿ ಸ್ಥಳದಲ್ಲಿ ಅಕ್ರಮವಾಗಿ ಹಾಸ್ಟೆಲ್ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯ ನಿವಾಸಿ ಶಂಕರ ಶೆಟ್ಟಿ ಎಂಬವರು  ಶಾಸಕರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಹಿನ್ನಲೆಯಲ್ಲಿ  ಶಾಸಕ ರಾಜೇಶ್ ನಾಯ್ಕ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ,ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವವರೆಗೆ ಕಾಮಗಾರಿ ನಡೆಸದಂತೆ ಶಾಸಕರು ಇಲಾಖಾಧಿಕಾರಿಗಳು, ಗುತ್ತಿಗೆದಾರರು, ಇಂಜಿನೀಯರ್ ಗಳಿಗೆ ಸೂಚಿಸಿದ್ದಾರೆ,

IMG-20200806-WA0036ಕಟ್ಟಡ ನಿರ್ಮಾಣಕ್ಕಾಗಿ ರಸ್ತೆ ಬದಿಗುಡ್ಡ ಅಗೆಯಲಾಗಿದ್ದು ನಿರ್ಮಾಣದ ಜಾಗದ ಹಿಂಭಾಗ ಕುಸಿಯುವ ಭೀತಿಯಲ್ಲಿದ್ದು,ಲೋಕೋಪಯೋಗಿ ಇಲಾಖೆಯವರು ಈ ಹಿಂದೆ ಸ್ಥಳ ಪರಿಶೀಲಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದರೂ, ಇಲಾಖಾಧಿಕಾರಿಗಳು ಮತ್ತೆ ಕಾಮಗಾರಿಯನ್ನು ಮುಂದುವರಿಸಿದ್ದರು.ಎರಡು ದಿನಗಳ ಹಿಂದೆ ನಿರಂತರ ಸುರಿದ ಮಳೆಯಿಂದ ಪಲ್ಕದ ಗುಡ್ಡ ಜರಿದು ಕಟ್ಟಡದ ಅಡಿಪಾಯ ಮಣ್ಣಿನಡಿಗೆ ಸಿಲುಕಿತ್ತು. ಶಾಸಕರ ಭೇಟಿಯ ವೇಳೆ ದೂರುದಾರರಾದ ಶಂಕರ ಶೆಟ್ಟಿ, ಸ್ಥಳಿಯರಾದ ಜನಾರ್ಧನ ಬಾರಿಂಜೆ,ಕಾರ್ತಿಕ್ ಬಳ್ಳಾಲ್,ಪುನಿತ್ ಶೆಟ್ಟಿ,ಇಲ್ಯಾಸ್, ಕೆ.ಆರ್.ಡಿ.ಎಲ್ ಇಂಜಿನಿಯರ್ ರಕ್ಷಿತ್,ಗುತ್ತಿಗೆದಾರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *