ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ 114ಕೋಟಿಗೂ ಮಿಕ್ಕಿ ಮೊತ್ತದ ವ್ಯವಹಾರ ನಡೆಸಿ, ರೂ 70. 25 ಲಕ್ಷ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ವಿತರಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಆನಂದ ಹೇಳಿದ್ದಾರೆ.
ಬಂಟ್ವಾಳ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಒಟ್ಟು 2,752 ಮಂದಿ ಸದಸ್ಯರನ್ನು ಹೊಂದಿರುವ ಸಂಘವು ಬಿ.ಸಿ.ರೋಡ್, ನಾವೂರು, ಪಂಜಿಕಲ್ಲು ಗ್ರಾಮದ ಸೋರ್ನಾಡು ಎಂಬಲ್ಲಿ ಶಾಖೆಗಳನ್ನು ಹೊಂದಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕೃಷಿಕರಿಗೆ ಒಟ್ಟು ರೂ 26.89ಕೋಟಿ ಮೊತ್ತದ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಕೂಡಾ ತೃಪ್ತಿಕರವಾಗಿದೆ. ಸಂಘವು ವಿವಿಧ ಯೋಜನೆಯಡಿ ಒಟ್ಟು ರೂ 18.31ಕೋಟಿಗೂ ಮಿಕ್ಕಿ ಮೊತ್ತದ ಠೇವಣಾತಿ ಹೊಂದಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ಧೇಶಕರಾದ ಎಂ.ಮಹಾಬಲ ಶೆಟ್ಟಿ, ನಾರಾಯಣ, ಹರೀಶ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ ಕಾಮತ್ ಇದ್ದರು.
