ಬಂಟ್ವಾಳ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಬುಧವಾರ ಬೆಳಗ್ಗೆ ಶಿಲಾನ್ಯಾಸ ನಡೆಯುವ ಹೊತ್ತಿನಲ್ಲಿ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಅದರ ನೇರ ಪ್ರಸಾರ ವೀಕ್ಷಣೆ ನಡೆಯಿತು. ಶಿಲಾನ್ಯಾಸ ಸಂದರ್ಭ ಶಂಖ, ಜಾಗಟೆ, ಚೆಂಡೆ ವಾದನ ಮೂಲಕ ವಿಜಯೋತ್ಸವದ ಸಂಭ್ರಮವನ್ನು ಆಚರಿಸಲಾಯಿತು.ಬಳಿಕ ಭಜನಾ ಕಾರ್ಯಕ್ರಮ, ಮಹಾಮಂಗಲಾರತಿ ನಡೆಯಿತು.
IMG-20200805-WA0087
ಈ ವೇಳೆ ಅಯೋಧ್ಯೆ ಕರಸೇವೆ ಸಂದರ್ಭ ನೇತೃತ್ವ ವಹಿಸಿದ್ದ ಹಿರಿಯ ಆರೆಸ್ಸೆಸ್ ನಾಯಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಪೂಜೆ ನೆರವೇರಿಸಿದರು.
IMG-20200805-WA0086ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ರಾಷ್ಟ್ರಸೇವಿಕಾ ಪ್ರಾಂತ ಪ್ರಮುಖ್ ಕಮಲಾ ಪ್ರಭಾಕರ ಭಟ್, ಶ್ರೀರಾಮ ಮಂದಿರ ಆಡಳಿತ ಸಮಿತಿ ಅಧ್ಯಕ್ಷ  ಆರ್. ಚೆನ್ನಪ್ಪ ಕೋಟ್ಯಾನ್, ವಿಹಿಂಪ ವಿಟ್ಲ ಪ್ರಖಂಡ ಅಧ್ಯಕ್ಷ ಕ.ಕೃಷ್ಣಪ್ಪ, ಬಜರಂಗದಳ ವಿಟ್ಲ ಅಧ್ಯಕ್ಷ ಮಿಥುನ್ ಸಹಿತ ಸಂಘ ಪರಿವಾರದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.                 ಬಂಟ್ವಾಳದಲ್ಲು ಸಂಭ್ರಮ:  ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳದಲ್ಲು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮ ಪಟ್ಟರು. ಬಂಟ್ವಾಳ ರಾಮನಗರದಲ್ಲಿರುವ ಶ್ರೀರಾಮ ಭಜನಾ ಮಂದಿರದಲ್ಲಿ ಭಜನಾ  ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ನಡಯಿತು.

By Suddi9

Leave a Reply

Your email address will not be published. Required fields are marked *