ಬಂಟ್ವಾಳ:   ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ಪವಿತ್ರ ಜಾಗದಲ್ಲಿ  ಐತಿಹಾಸಿಕವಾಗಿ ಜಗತ್ತಿನ ಅತೀ ಅದ್ಭುತವಾದ ಭವ್ಯ ಶ್ರೀರಾಮ ಮಂದಿರಕ್ಕೆ ಬುಧವಾರ ಭೂಮಿ ಪೂಜೆ ನೆರವೇರುವುದರೊಂದಿಗೆ ಕರಸೇವಕರಿಗೆ ಮುಕ್ತಿ ಪ್ರಾಪ್ತಿಯಾದಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಂಟ್ವಾಳ ತಾಲೂಕು  ಭೌದ್ದಿಕ್ ಪ್ರಮುಖ್ ಚಂದ್ರಶೇಖರ  ಕೆಯಾಬೆ ಅಭಿಪ್ರಾಯಪಟ್ಟಿದ್ದಾರೆ.  ಬಂಟ್ವಾಳ ತಾಲೂಕಿನ ಕರ್ಪೆಯ ಹಿಂದು ಜಾಗರಣ ವೇದಿಕೆ ಘಟಕದ ವತಿಯಿಂದ  ಅಯೋಧ್ಯೆ  ಶ್ರೀರಾಮ ಮಂದಿರಕ್ಕೆ  ಭೂಮಿ ಪೂಜೆ ಪ್ರಯುಕ್ತ  ಕರ್ಪೆ ಶ್ರೀರಾಮಾಂಜನೆಯ ಮಂದಿರದಲ್ಲಿ ಬುಧವಾರ  ನಡೆದ ವಿಶೇಷ ಪೂಜೆ, ರಾಮ ಭಜನೆ ಸಂಕಿರ್ತನೆ ಹಾಗೂ ಶ್ರೀರಾಮ ಜನ್ಮ ಭೂಮಿ ಯಲ್ಲಿ ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಕರಸೇವಕರಾಗಿ ತೆರಳಿರುವ    ಶ್ರೀರಾಮ ಭಕ್ತ ಕರಸೇವಕನ್ನು ಸನ್ಮಾನಿಸಿ ಅವರು ಮಾತಾನಾಡುತ್ತಿದ್ದರು.     ರಾಮಮಂದಿರ ನಿರ್ಮಾಣ ಕಾರ್ಯದ ಹೋರಾಟಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷತ್ ನ ಕರೆಯಂತೆ  1990  ಮತ್ತು 1992 ರಲ್ಲಿ ಪ್ರಾಣದ ಹಂಗು ,ತನ್ನ ಕುಟುಂಬವನ್ನು ತೊರೆದು ಅಯೋಧ್ಯೆಗೆ ತೆರಳಿರುವ ಶ್ರೀರಾಮ ಭಕ್ತ ಕರಸೇವಕರ ಪರಿಶ್ರಮಕ್ಕೆ ಸಿಕ್ಕಿದ ಪ್ರತಿಫಲವಾಗಿದೆ ಎಂದು ಅವರು ಬಣ್ಣಿಸಿದರು.
IMG-20200805-WA0073
ಹಿಂದು ಜಾಗರಣ ವೇದಿಕೆ ವಿಟ್ಲ  ತಾ.ಸಂಪರ್ಕ ಪ್ರಮುಖ್ ಅರುಣ್ ಸಜೀಪ  ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ  ಉಡುಪಿಯ ಪೇಜಾವರ ಶ್ರೀಗಳ ಪಾತ್ರವನ್ನು ಸ್ಮರಿಸುತ್ತಾ ಕರಸೇವಕರು ರಕ್ತವನ್ನು ಬೆವರಿನ ರೂಪದಲ್ಲಿ ಅರ್ಪಿಸಿದ ಪರಿಣಾಮ  ರಾಮ ಮಂದಿರ ನಿರ್ಮಾಣಕ್ಕೆ ಸಹಕಾರಿ ಯಾಗಿದ್ದು ,ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ದೂರದೃಷ್ಟಿ ಚಿಂತನೆಯೇ ಮೂಲ ಪ್ರೇರಣೆ ಯಾಗಿದೆ ಎಂದರು.
ಗೌರಾರ್ಪಣೆ:
ಇದೇ ವೇಳೆ ಸಿದ್ದಕಟ್ಟೆ ಪರಿಸರದ ಅಯೋಧ್ಯೆ ಕರಸೇವಕರಾದ ಗೋಪಾಲ ಗೌಡ ಕೊರ್ಯಾರು,ಓಬಯ ಗೌಡ ಮಂಚಕಲ್ಲು, ವಿಶ್ವನಾಥ ಶೆಟ್ಟಿಗಾರ್ ಸಂಗಬೆಟ್ಟು, ಯೋಗಿಶ್ ಶೆಟ್ಟಿಗಾರ್ ಉರಂಡಗೆ,ಸುಂದರ ಸಂಗಬೆಟ್ಟು, ಜನಾರ್ದನ ಗೌಡ ದೇವಸ,ವಾಸುದೇವ ಶೆಟ್ಟಿಗಾರ್ ಸಂಗಬೆಟ್ಟು, ರವರನ್ನು ಗೌರವಿಸಲಾಯಿತು.
ಹಿ.ಜಾ.ವೇ ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ,ಹಿಂದು ಯುವವಾಹಿನಿ ಜಿಲ್ಲಾ ಸಂಯೋಜಕ  ಪ್ರಶಾಂತ್, ಹಿ.ಜಾ.ವೇ.ಕರ್ಪೆ ಘಟಕ ಅದ್ಯಕ್ಷ ನವೀನ ಪೂಜಾರಿ,ಶ್ರೀರಾಮಾಂಜನೆಯ ಮಂದಿರ ವ್ಯವಸ್ಥಾಪಕರಾದ ಡಾ.ರಾಮರಾಯ ಪ್ರಭು ದೋಟ, ಸ್ಥಳೀಯ ಬಿ.ಜೆ.ಪಿ. ಮುಖಂಡರಾದ ರತ್ನಕುಮಾರ್ ಚೌಟ,ಸಂಗಬೆಟ್ಟು ಗ್ರಾಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ,
ಸುಬ್ರಹ್ಮಣ್ಯ ಭಟ್ ದೋಟ, ಸಂದೇಶ್ ಶೆಟ್ಟಿ ಸಿದ್ದಕಟ್ಟೆ, ಮಾದವ ಶೆಟ್ಟಿಗಾರ್, ಉಮೇಶ್ ಗೌಡ ಮಂಚಕಲ್ಲು, ಹಿ.ಜಾ.ವೇ ಉಪಾಧ್ಯಕ್ಷ ರಂಜಿತ್  ಪೂವಳ,ಪ್ರದಾನ ಕಾರ್ಯದರ್ಶಿ ತೇಜಸ್ ಮರ್ದೊಟ್ಟು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.
Attachments area

By Suddi9

Leave a Reply

Your email address will not be published. Required fields are marked *