ಕುಪ್ಪೆಪದವು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ  ನೀಡಿದ  ಸಹಕಾರದಿಂದಾಗಿ ಮತ್ತು ಕಾರ್ಯಕರ್ತರ ಬೆಂಬಲದಿಂದಾಗಿ  ನನ್ನ ಕ್ಷೇತ್ರದಲ್ಲಿ ಗರಿಷ್ಟ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ| ಭರತ್ ವೈ ಶೆಟ್ಟಿ ಅವರು ಹೇಳಿದ್ದಾರೆ.
20200729_212858
ಅವರು ಬುಧವಾರ ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಕಿಲೆಂಜಾರು ಗ್ರಾಮದ ಕಟ್ಟೆಮಾರು- ನೀಲಿ ಎಂಬಲ್ಲಿಯ 32 ಲಕ್ಷ ರೂಪಾಯಿ ವೆಚ್ಚದ ರಸ್ತೆ, ಕುಪ್ಪೆಪದವು -ಪಾಕಾಜೆ ಶಾಂತಿಗುಡ್ಡೆ ಯ 35 ಲಕ್ಷ ರೂಪಾಯಿ ವೆಚ್ಚದ ರಸ್ತೆ, ಮತ್ತು ಅಂಬೆಲೊಟ್ಟು ತುಂಬೆಮಜಲು ರಸ್ತೆಯ 33 ಲಕ್ಷ ರೂಪಾಯಿ ಸೇರಿದಂತೆ  ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ  ಮತ್ತು ಎಡಪದವು ಪಂಚಾಯತ್ ನ ಪದ್ರೆoಗಿ  ಮೋನಪ್ಪ ಕರ್ಕೇರ ಮನೆಯ 33 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಲಾಗುವ ರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
20200729_213002
ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು ಮಾತನಾಡಿ ಕಾಂಕ್ರೀಟೀಕರಣ ಗೊಳ್ಳಲಿರುವ ಕಿಲೆಂಜಾರು ಗ್ರಾಮದ ಮೂರು ರಸ್ತೆಗಳು ಗ್ರಾಮಸ್ಥರ  ಬಹುಕಾಲದ ಬೇಡಿಕೆಯಾಗಿದ್ದು, ಕಟ್ಟೆಮಾರು ಎಂಬಲ್ಲಿಂದ ನೀಲಿ ಎಂಬಲ್ಲಿಗೆ ಇದುವರೆಗೂ ರಸ್ತೆ ಇಲ್ಲದೆ  ಜನರು ಸಂಕಷ್ಟಕ್ಕೀಡಾಗಿದ್ದರು  ಶಾಸಕರ ಮುತುವರ್ಜಿಯಿಂದಾಗಿ ಗ್ರಾಮಸ್ಥರ ಬೇಡಿಕೆ ಈಡೇರುವ ಮೂಲಕ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಉತ್ತರ ಮಂಡಲ ಬಿಜೆಪಿ ಉಪಾಧ್ಯಕ್ಷೆ ಅಮೃತ್ ಲಾಲ್ ಜೋಯೆಲ್ ಡಿ’ಸೋಜಾ, ಕಾಮಗಾರಿ ಗುತ್ತಿಗೆದಾರ ಜಗದೀಶ್ ಕುಲಾಲ್ ಪಾಕಾಜೆ,ಎಡಪದವು ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಂಗಾಧರ್,   ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಅಮಿತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣಾ ಭಾಸ್ಕರ ಶೆಟ್ಟಿ ಬಾರ್ದಿಲ, ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಾಜೆ, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ.ಎಡಪದವು,  ರೈತ ಮೋರ್ಚಾ ಉಪಾಧ್ಯಕ್ಷ ಸತೀಶ್ ಬಳ್ಳಾಜೆ, ಪ್ರ. ಕಾರ್ಯದರ್ಶಿ ಆನಂದ ದೇವಾಡಿಗ, ಎಸ್ಸಿ ಮೋರ್ಚಾ ಕಾರ್ಯದರ್ಶಿ ರಾಜೇಶ್ ನಾಯ್ಕ್, ಕಲ್ಲಾಡಿ ಬೂತ್ ಕಾರ್ಯದರ್ಶಿ ಅಶೋಕ್ ಕಟ್ಟೆಮಾರು, ಮುಖಂಡರುಗಳು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.

By Suddi9

Leave a Reply

Your email address will not be published. Required fields are marked *