Published On: Thu, Jul 30th, 2020

ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಚರಣೆ, ನಿಲ್ಲಿಸಿದ್ದ ಕಾರಿನಿಂದ ಹಣ ಕದ್ದ ಕಳ್ಳನ ಬಂಧನ

ಉಡುಪಿ:ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎಸ್, ಐಪಿಎಸ್ ರವರ ನಿರ್ಧೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಕೆ.ಎಸ್.ಪಿ.ಎಸ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಆರ್.ಜೈಶಂಕರ್ ರವರ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸೆಪೆಕ್ಟರ್  ಮಂಜಪ್ಪ ಡಿ.ಆರ್ ಅವರು ಖಚಿತ ಮಾಹಿತಿ ಮೇರೆಗೆ ಉಡುಪಿ ಡಿಸಿಐಬಿ ಸಿಬ್ಬಂದಿಯೊಂದಿಗೆ ಉಡುಪಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಗುರುಪ್ರಸಾದ್( 32)ಎಂಬವರನ್ನು ದಸ್ತಗಿರಿ ಮಾಡಲಾಯಿತು.d896a2f9-22ae-4407-8688-9a612dc6ba44

ಆರೋಪಿ ಮಂಗಳೂರು ಕ್ಲಾಕ್ ಟವರ್ ಬಳಿ ನಿಲ್ಲಿಸಿದ ಕ್ರೆಟ್ಟಾ ಕಾರಿನಿಂದ ಕಳವು ಮಾಡಿದ ನಗದು ಹಣ 2.03,700ರೂಪಾಯಿ ಹಾಗೂ ಕಳವು ಮಾಡಿದ ಹಣದಲ್ಲಿ 8000ರೂಪಾಯಿಗೆ ಖರೀದಿಸಿದ ಮೊಬೈಲ್ ಫೋನ್ ಸ್ವಾಧೀನಪಡಿಸಿಕೊಂಡು ಉಡುಪಿ ನಗರ ಠಾಣೆಗೆ ಹಸ್ತಾಂತರಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈತ 2015ರಲ್ಲಿ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿವೇಳೆ ಬೀಗ ಹಾಕಿದ ಮನೆಯ ಹಂಚು ತೆಗೆದು ಕಳ್ಳತನ ಮಾಡಿದ್ದು ಈ ಪ್ರಕರಣದಲ್ಲಿ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಕಾರ್ಯಚರಣೆಯಲ್ಲಿ ಡಿಸಿಐಬಿ ಘಟಕದ ಎ ಎಸ್ ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಡೆ,ಚಂದ್ರ ಶೆಟ್ಟಿ,ಸುರೇಶ, ಸಂತೋಷ ಕುಂದರ್,ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್,ದಯಾನಂದ ಪ್ರಭು,ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter