Published On: Tue, Jul 28th, 2020

ವಿವಾಹಿತೆ ನಾಪತ್ತೆ, ಶವವಾಗಿ ಪತ್ತೆ

ಕೈಕಂಬ : ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಕೊಲ್ಲಬೆಟ್ಟು ನಿವಾಸಿ ಆಶಾಲತಾ(36) ಎಂಬಾಕೆ ಜು. 27ರಂದು ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ. ಜು. 26ರಂದು ಊಟ ಮಾಡಿ ಮಲಗಿದ್ದ ಇವರು ಜು. 27ರಂದು ಬೆಳಿಗ್ಗೆ ನಾಪತ್ತೆಯಾಗಿದ್ದು, ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ.28vpashalatha

ಪತಿ ರಮಾನಾಥ ಮೂಲ್ಯರು ಬಜ್ಪೆ ಠಾಣೆಗೆ ದೂರು ದಾಖಲಿಸಿದ್ದು, ಮಂಗಳವಾರ ಹತ್ತಿರದ ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ ಬಜಪೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದಾರೆ.ಮೃತರು ಎರಡು ಮಕ್ಕಳಲಿ ಒಂದು ಮಗು ಕೆಲ ಸಮಯಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು ಇದರಿಂದ ಆಶಲತಾ ಅವರು ಮಾನಸಿಕವಾಗಿ ಅಘಾತಕ್ಕೆ ಒಳಗಾಗಿದ್ದರು. ಇದರಿಂದಾಗಿ ಇವರು ಆತ್ಮಹತ್ಯೆ ಗೈದಿರಬಹುದೆಂದು ಶಂಖಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter