ಬಂಟ್ವಾಳ: ಸ್ಕಿಡ್ ಅಗಿ ದ್ವಿಚಕ್ರವಾಹನ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಂದಾವರದಲ್ಲಿ ನಡೆದಿದೆ.ಬಂಟ್ವಾಳ ತಾ.ನ ನರಿಕೊಂಬು ನಿವಾಸಿ ಶಿವಾನಂದ ( 45) ಮೃತಪಟ್ಟ ದುರ್ದೈವಿ.
ಇವರು ನಂದಾವರ ದೇವಸ್ಥಾನದಲ್ಲಿ ಸಂಬಂಧಿಕರ ಉತ್ತರಕ್ರಿಯೆ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುವ ವೇಳೆ ನಂದಾವರದಲ್ಲಿ ದ್ವಿಚಕ್ರವಾಹನ ಸ್ಕಿಡ್ ಅಗಿ ಕಾಂಕ್ರೀಟ್ ರಸ್ತೆ ಬಿದ್ದು ಗಂಭೀರ ಗಾಯವಾಗಿತ್ತು.ಬಳಿಕ ಇವರನ್ನು ಖಾಸಗಿ ದಾಖಲಿಸಲಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
