ಬಂಟ್ವಾಳ : ವಾರದ ಲಾಕ್ ಡೌನ್ ನ ಲಾಕ್ ಕಳಚಿ ಮೂರುದಿನಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದಿದ್ದು ,ಇದೀಗ ತಿಂಗಳ ಕೊನೆಯ ಸಂಡೇ ಲಾಕ್ ಡೌನ್ ಗೆ ಬಂಟ್ವಾಳ, ಬಿ.ಸಿ.ರೋಡ್ ಸಹಿತ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.  ಭಾನುವಾರ ಬೆಳಗ್ಗೆಯೇ ಬಂಟ್ವಾಳ, ಬಿ.ಸಿ.ರೋಡ್ ಸಹಿತ ಪೊಳಲಿ ದ್ವಾರ, ಕೈಕಂಬ,ಮೆಲ್ಕಾರ್,ಕಲ್ಲಡ್ಕ ಮೊದಲಾದ ನಗರಪ್ರದೇಶಗಳು ಸ್ತಬ್ದಗೊಂಡಿತ್ತು.  ಅಂಗಡಿಗಳು ಬಾಗಿಲು ಹಾಕಿದ್ದರೆ, ಹಾಲು,ಔಷಧ,ಕೆಲ ತರಕಾರಿ, ಪತ್ರಿಕಾ ವಿತರಕರಷ್ಟೇ ಕಂಡುಬಂದರು.
IMG-20200726-WA0011
ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವ  ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲೆ ಸಹಿತ ಬಂಟ್ವಾಳದಲ್ಲೂ ಕಟ್ಟುನಿಟ್ಟಿನ ಎಚ್ಚರ ವಹಿಸುವುದು ಅನಿವಾರ್ಯವಾಗಿದ್ದು, ಈ ತಿಂಗಳ ಪ್ರತಿ ಭಾನುವಾರವೂ ಲಾಕ್ ಡೌನ್ ಮಾಡಲಾಗುತ್ತಿದೆ. ವಾಹನಸಂಚಾರಕ್ಕು ಬ್ರೇಕ್ ಹಾಕಲಾಗಿದ್ದರೂ ,ಬೆಳಗ್ಗಿನಿಂದಲೂ ಬಂಟ್ವಾಳ,ಬಿ.ಸಿ.ರೋಡ್ ಪ್ರದೇಶದಲ್ಲಿ ಮಾತ್ರ ಕೆಲ ಖಾಸಗಿ ವಾಹನಗಳು,ದ್ವಿಚಕ್ರ ಸವಾರರು ಸಂಚರಿಸುತ್ತಲೇ ಇದ್ದವು,ಬಂಟ್ವಾಳದಲ್ಲಿ  ಗೃಹರಕ್ಷಕದಳದ ಮಹಿಳಾ ಸಿಬ್ಬಂದಿಗಳ ಹೊರತು ಪೊಲೀಸರು ಯಾರೊಬ್ಬರು ಕರ್ತವ್ಯದಲ್ಲಿರಲಿಲ್ಲ ಹಾಗಾಗಿ ದ್ವಿಚಕ್ರ ಸವಾರರಂತು ಯಾರ ಅಂಜಿಕೆಯಿಲ್ಲದೆ ಓಡಾಡುತ್ತಿದ್ದವು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಮತ್ತು ಬಿ.ಮೂಡ,ಪಾಣೆಮಂಗಳೂರು ಗ್ರಾಮಗಳಲ್ಲಿ ಕೊರೊನಾ ಅಬ್ಬರಿಸಿದ್ದು, ಕಳೆದ ಮೂರು ತಿಂಗಳಲ್ಲಿ ಹಲವು ಪ್ರಕರಣಗಳು ಕಂಡುಬಂದಿವೆ.ಹಾಗೆಯೇ ತಾಲೂಕಿನ ಗ್ರಾಮೀಣ ಭಾಗದ ಕೆಲವೆಡೆಯಲ್ಲಿ ಕೊರೋನ ಪ್ರಕರಣ ಕಾಣಿಸಿಕೊಳ್ಳುತ್ತಲೇ ಇದೆ.

By Suddi9

Leave a Reply

Your email address will not be published. Required fields are marked *