ಬಂಟ್ವಾಳ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ಮತ್ತು ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಂಗಳ ಕಾರ್ಯಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಧನ ಸಹಾಯ ಹಸ್ತಾಂತರಿಸಲಾಯಿತು.

SAVE_20200725_161936

ಎಲುಬು ಕ್ಯಾನ್ಸರ್ ಗೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ವತ್ರೆಯೊಂದರಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಕುಮೇರು ದಿವಂಗತ ಸುಂದರ ಪೂಜಾರಿ, ಚಂಪ ದಂಪತಿಗಳ ಪುತ್ರ ಸುಶಾಂತ್ ಇವರ ಚಿಕಿತ್ಸೆಗೆ ರೂ. 15 ಸಾ.ರೂ.ವಿನ ಧನ ಸಹಾಯವನ್ನು ನೀಡಲಾಯಿತು‌. ಆದೇರೀತಿ ತಂದೆ ಮತ್ತು ಅಣ್ಣನನ್ನು ಕಳೆದುಕೊಂಡು ತನ್ನ ತಾಯಿಯ ಜೊತೆ ವಾಸಿಸುತ್ತಿರುವ ಬೆಳ್ತಂಗಡಿ ತಾಲೂಕು ಶಿರ್ಲಾಲು ದಿವಂಗತ ತಿಮ್ಮಪ್ಪ ಮತ್ತು ಜಾನಕಿ ದಂಪತಿಗಳ ಪುತ್ರಿ ರೇವತಿ ಅವರ ಮದುವೆ ಮಂಗಳ ಕಾರ್ಯಕ್ಕೆ ಹಾಗೂ ಮಂಗಳೂರು ತಾಲೂಕಿನ ಸೋಮೇಶ್ವರ ಸಮೀಪದ ಕುಂಪಲದ ಬಡ ಕುಟುಂಬವಾದ ಭಾಸ್ಕರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕು.ಪ್ರಜ್ಞಾ ಅವರ ಮದುವೆ ಮಂಗಳ ಕಾರ್ಯಕ್ಕೆ ತಲಾ ರೂ. 10 ಸಾ.ರೂ.ವಿನ ಧನ ಸಹಾಯದ ಚೆಕ್ ನ್ನು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ  ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *