ಬಂಟ್ವಾಳ: ಸದಾ ದುಡಿಮೆಗೆ ಹೆಗಲಾಗಿ ದುಡಿಯುತ್ತ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ, ಹಠಾತ್ತನೇ ಎರಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ  ಈ ಹುಡುಗಿಯದ್ದು,ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ದುಡಿದ ಇವಳು ಶೇ. 94 ಗಳಿಸಿದ್ದಾಳೆ.ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ  ಅನ್ನೋ ಪ್ರತಿಭಾವಂತೆಯ ಕಥೆ.   ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ವೊಂದರಲ್ಲಿ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡವಳು ಅಶ್ವಿನಿ.ಪ್ರಾಥಮಿಕ ಮತ್ತು  ಪ್ರೌಢಶಾಲೆ ಯವರೆಗೂ ಮೂಲ್ಕಿಯ ಸರಕಾರಿ  ಶಾಲೆಯಲ್ಲಿ ಕಲಿತ ಈಕೆ, ಕನ್ನಡ ಮಾಧ್ಯಮದಲ್ಲಿಯೇ ಓದಿದ್ದಳು.
ashwini (1)
ತನ್ನಿಚ್ಛೆಯ ಸ್ಟಾಟಿಸ್ಟಿಕ್ಸ್  ವಿಷಯವೊಂದು ಪಿ.ಯು.ಸಿ.ಯಲ್ಲಿ ಸರಕಾರಿ ಕಾಲೇಜಿನಲ್ಲಿ ಲಭ್ಯವಾಗದ ಕಾರಣ  ಖಾಸಗಿ ಕಾಲೇಜಿನ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಯಾದಾಗ ಅಮ್ಮನ ಜೊತೆ  ಬೀಡಿ ಕಟ್ಟುವ ಕಾಯಕದಲ್ಲಿ ತೊಡಗುತ್ತಾ,ಸತತವಾಗಿ ಓದುತ್ತಾ, ಮಧ್ಯದ ನಾಲ್ಕು ವರ್ಷಗಳ ಅಂತರದಿಂದ ಕೆಲವು ವಿಷಯದ ಪಠ್ಯಕ್ರಮದಲ್ಲಿ ಆದ ಬದಲಾವಣೆಗಳ ಮಧ್ಯೆಯೂ ಯಾವುದೇ ಟ್ಯೂಷನ್ ಇಲ್ಲದೇ ಸ್ವಂತ ಪರಿಶ್ರಮದಿಂದ ಶೇ. 94 ಅಂಕ ಗಳಿಸಿ ಬಂಟ್ವಾಳದ ಎಸ್.ವಿ.ಎಸ್.ಪ.ಪೂ. ಕಾಲೇಜಿಗೆ ಹೆಮ್ಮೆಯನ್ನು ತಂದುಕೊಟ್ಟ ಕುವರಿ ಈ ಅಶ್ವಿನಿ. ಪ್ರಸ್ತುತ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ತಾಯಿ ಸುನೀತಾ  , ಚಿತ್ರಕಲಾವಿದ, ವಿದ್ಯಾರ್ಥಿ, ಅಣ್ಣ  ಅಕ್ಷಯ್ ಮತ್ತು ಅಕ್ಕನೊಂದಿಗೆ  ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.
 ಮೊನ್ನೆ ಪಿ.ಯು.ಸಿ. ಫಲಿತಾಂಶ  ಬರುವ ಹೊತ್ತಿಗೆ ಅಶ್ವಿನಿ  ಮೂಡಬಿದ್ರೆಯಲ್ಲಿರುವ  ಗೇರುಬೀಜದ ಫ್ಯಾಕ್ಟರಿಯ  ದುಡಿಮೆಯಲ್ಲೇ ನಿರತಳಾಗಿದ್ದವಳು . ಪಿಯುಸಿಯಲ್ಲಿ ಅಂಕವೇನೋ ಪಡೆದಾಯಿತು ಆದರೆ ಮತ್ತೆ ಪದವಿ ಕನಸು ನನಸಾಗಿಸಲು  ಕಾಲೇಜು ಶುಲ್ಕ  ಒಗ್ಗೂಡಿಸಲು ಹೋರಾಡುತ್ತಿದ್ದಾಳೆ ಈಕೆ.    ಲಾಕ್ ಡೌನ್ ಎನ್ನುವುದು ಇಲ್ಲದಿರುತ್ತಿದ್ದರೆ ಇವಳೇ ಸ್ವಂತ ಕೈಯಲ್ಲಿ ದುಡಿದು ಪದವಿ ಓದುತ್ತಿದ್ದಳೇನೋ? ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ.ಲಾಕ್ ಡೌನ್ ನಿಂದ ಕೆಲಸವೂ ಸಿಗುತ್ತಿಲ್ಲ. ಅಮ್ಮ ,ಅಕ್ಕ, ಎಲ್ಲರೂ ಕೆಲಸವಿಲ್ಲದೇ ಖಾಲಿ ಕೈಯಲ್ಲಿ  ಕೂತಿರಬೇಕಾದ ಕಾರಣ ಬಾಕಿಯಾದ ಮನೆಬಾಡಿಗೆ , ಸರಿದೂಗಿಸಬೇಕಾದ ಮನೆಖರ್ಚು ಎಲ್ಲಕ್ಕೂ ಅಮ್ಮ -ಅಕ್ಕ- ಅಣ್ಣನ ದುಡಿಮೆಗೆ ಹೆಗಲು ಕೊಡಬೇಕಾದ ಪರಿಸ್ಥಿತಿ ಇದೆ ಈಕೆಯದು.ಹೀಗೆ ಮುಂದೆ ಪದವಿ ಕನಸು ಕಾಣುವುದೋ? ಮನೆಯ ಕಷ್ಟಕ್ಕೆ ಹೆಗಲಾಗುವುದೋ ಎನ್ನುವ ಆಯ್ಕೆಯ ಗೊಂದಲದಲ್ಲಿರುವ ಅಶ್ವಿನಿಗೆ ಪದವಿ ಕನಸನು ನನಸಾಗಿಸಲು ನೆರವಾಗುವ ಕೈಗಳು ಬೇಕಿದೆ.ಪಾಠದಲ್ಲಿ ಮಾತ್ರವಲ್ಲ ಪಠ್ಯೇತರ ಚಟುವಟಿಕೆಯಾದ ಕ್ರೀಡೆ, ಸಂಗೀತ, ರಂಗೋಲಿ ,ನೃತ್ಯ ಎಲ್ಲದರಲ್ಲೂ ಸಾಧಕಿಯು ಹೌದು .ಪ್ರೌಢಶಾಲೆಯಲ್ಲಿ ಖೋಖೋ ಸ್ಪರ್ಧೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದವಳು. ಕರೆಂಟಿಲ್ಲದೆ  ಬುಡ್ಡಿದೀಪದಲ್ಲೇ ಓದಿ ಎಸ್.ಎಸ್.ಎಲ್.ಸಿ.ಯಲ್ಲೂ ಶೇ. 88  ಗಳಿಸಿದ ಸಾಧನೆ ಇವಳದ್ದು.ಪ್ರತಿದಿನ ಮುಂಜಾವು ಮನೆ ಎದುರು  ಹೊಸ ಹೊಸ ರಂಗೋಲಿ ಹಾಕುವ ಈ ಕನಸು ಕಂಗಳ ಅಶ್ವಿನಿಯ ಬದುಕಲಿ ಪದವಿ ಕಲಿಕೆಯ ಕನಸು ಬತ್ತದಂತೆ ಒಂದಿಷ್ಟು ಕೈಗಳು ಜೊತೆಯಾಗಬೇಕಿವೆ. ಜೊತೆಗೂಡುವ ಮನದವರು ಈ ಸಂಖ್ಯೆಯನ್ನು ಸಂಪರ್ಕಿಸಿ ಖುದ್ದಾಗಿ ನೆರವು ನೀಡಬಹುದಾಗಿದೆ. ಪ್ರತಿದಿನ ಮುಂಜಾವು ಮನೆ ಎದುರು  ಹೊಸ ಹೊಸ ರಂಗೋಲಿ ಹಾಕುವ ಈ ಕನಸು ಕಂಗಳ ಅಶ್ವಿನಿಯ ಬದುಕಲ್ಲಿ ಪದವಿ ಕಲಿಕೆಯ ಕನಸು ಬತ್ತದಂತೆ ಒಂದಿಷ್ಟು ಶಿಕ್ಷಣ ಪ್ರೇಮಿಗಳು,ದಾನಿಗಳ ನೆರವಿನ ಅಗತ್ಯವಿದೆ. ಅಶ್ವಿನಿಗೆ ನೆರವಾಗಲು ಬಯಸುವವರು ಈ ಸಂಖ್ಯೆಯನ್ನು ಸಂಪರ್ಕಿಸಿ  7039520266 ಅಥವಾ 8108599484 ನೆರವು ನೀಡಬಹುದಾಗಿದೆ.
—

By Suddi9

Leave a Reply

Your email address will not be published. Required fields are marked *