ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಸೇವಾಸಮಿತಿ ಮಲ್ಲೂರು ವತಿಯಂದ  ದೆಮ್ಮಲೆ ಅಂಗನವಾಡಿಯ ಬಳಿ ಗ್ರಾಮೀಣ ಪ್ರದೇಶದಲ್ಲಿ ಅದ್ಭುತ  ಸಾಧನೆಗೈದ ಸಾಧಕರನ್ನು ಅಭಿನಂದನಾ ಸಮಾರಂಭ ನಡೆಯಿತು.  ಹಾಗೆಯೇ ಶೈಕ್ಷಣಿಕ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ, ಕೊರೋನ ವಾರಿರ್ಯಾಸ್ ಆಗಿ ಸೇವೆಸಲ್ಲಿಸಿದವರಿಗೆ ಅಭಿನಂದನೆ ಮತ್ತು ಅಶಕ್ತ ಕುಟುಂಬಕ್ಕೆ ಆಶಾಕಿರಣ ಕಾರ್ಯಕ್ರಮದಡಿ ಆಹಾರಕಿಟ್ ವಿತರಿಸಲಾಯಿತು.
IMG-20200725-WA0045
ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಯೋಜನೆಯ ಬಜಪೆ ವಲಯದ ಯೋಜನಾಧಿಕಾರಿಗಳಾದ ರವಿ ಯವರು ವಹಿಸಿ, ವಿಶಿಷ್ಟ ಸಾಧನೆಗೈದ ಸಾಧಕರಿಗೆ ಶುಭ ಹಾರೈಸಿದರು. ಮಲ್ಲೂರು ಒಕ್ಕೂಟ ಅಧ್ಯಕ್ಷರಾದ ಜಯಂತ್ ಕುಮಾರ್ ಸ್ವಾಗತಿಸಿ, ಪದವುವಲಯ ಮೇಲ್ವಿಚಾರಕರಾದ ಸಂಪತ್ ಕುಮಾರ್ ವಂದಿಸಿದರು.  ಶಿಕ್ಷಕ ಜಯಕುಮಾರ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *