ಮುಂಬಯಿ : ಇಲ್ಲಿನ ತುಳು ಕನ್ನಡಿಗರಿಗೆ ಚಿರಪರಿಚಿತ ಹಾಗೂ ಜನಾನುರಾಗಿ ವ್ಯಕ್ತಿತ್ವದ ಸಂಘಟನಾ ಚತುರ ಶ್ರೀ ರಾಜು ಶ್ರೀಯಾನ್ ನಾವುಂದ ಜು. 23 ರಂದು ಹೃದಯಾಘಾತದಿಂದ ನಿಧನ ರಾಗಿರುವರು.IMG-20200723-WA0076 (1)

ಕೋಟಕ್ ಮಹೀಂದ್ರ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಸಹ ಅದರಿಂದ ಸ್ವತಃ ನಿರ್ವತ್ತಿಗೊಂಡು ಇತ್ತೀಚೆಗೆ ತನ್ನದೇ ಆದ ಉದ್ಯೋಗವನ್ನು ಪ್ರಾರಂಭಿಸಿದ್ದರು.ಇವರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ ಶ್ರೀಯಾನ್ ಶ್ರೇಷ್ಠ  ಭರತನಾಟ್ಯ ಪಟು.”ಅರುಣೋದಯ ಕಲಾ ನಿಕೇತನ”ಅನ್ನುವ ಸಂಸ್ಥೆಯನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯವನ್ನು ಕಲಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ.

ಕಲೆ,ಸಾಹಿತ್ಯ,ಸಂಸ್ಕೃತಿಯ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದ ರಾಜು ಶ್ರೀಯಾನ್ ರವರು ಯಾವತ್ತೂ ಆಶವಾದಿಯಾಗಿ ಬದುಕಿದ ಧೀಮಂತ ವ್ಯಕ್ತಿ. ಕನ್ನಡಿಗ ಕಲಾವಿಧರ ಪರಿಷತ್ತು ಮಹಾರಾಷ್ಟ್ರ ಇದರ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ನಗರದ ಹಲವಾರು ತುಳು ಕನ್ನಡಿಗರ ಸಂಘಟನೆಗಳಲ್ಲಿ ಕ್ರೀಯಾಶೀಲರಾಗಿದ್ದರು. ಶ್ರೀಯುತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *