ಕೈಕಂಬ: ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಜಾರು ಗ್ರಾಮದ ಕಟ್ಟಪುಣಿ ಬಳಿ ನೀರಿನ ರಭಸಕ್ಕೆ ಪರಿಸರದ ಒಂದೆರಡು ಮನೆಗಳಿಗೆ ಹಾನಿಯಾಗುವ ಸಂಭವವಿದ್ದು, ಈ ಸ್ಥಳಕ್ಕೆ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಾಯ ಎದುರಾಗಿರುವ ಪ್ರದೇಶದಲ್ಲಿ ಅಗತ್ಯ ಕಾಮಗಾರಿ ನಡೆಸುವುದಾಗಿ ಸ್ಥಳೀಯರಿಗೆ ಶಾಸಕರು ಭರವಸೆ ನೀಡಿದರು. ಮಳವೂರು ತಾಪಂ ಸದಸ್ಯೆ ಸುಪ್ರಿತಾ ಶೆಟ್ಟಿ, ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
