ಬಂಟ್ವಾಳ: ಕೊರೋನ ಸೋಂಕಿಗೆ ಬಿ.ಸಿ.ರೋಡಿಗೆ ಸಮೀಪದ  ಪರ್ಲಿಯಾ ನಿವಾಸಿ 70 ಹರೆಯದ ವೃದ್ಧ  ಮೃತಪಟ್ಟಿದ್ದಾರೆ. ಸೋಮವಾರ ಮಧ್ಯಾಹ್ನ ಮೃತದೇಹದ ಧಪನ ಕಾರ್ಯ ಬಿ.ಸಿ.ರೋಡಿನ ಮಸೀದಿಯೊಂದರ ಧಪನ ಭೂಮಿಯಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.ಇವರು ನ್ಯಮೋನಿಯ ಜ್ವರದಿಂದ ಬಳಲುತ್ತಿದ್ದು,ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈ ಸಂದರ್ಭದಲ್ಲಿ ಅವರ ಗಂಟಲದ್ರವ ಪರೀಕ್ಷೆ ನಡೆಸಲಾಗಿದ್ದು,ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತ್ತು.ಬಳಿಕ ಇವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಒಟ್ಟು 9  ಮಂದಿಗೆ ಕೊರೋನಾ : ಸೋಮವಾರ ಪುರಸಭಾ ವ್ಯಾಪ್ತಿಯಲ್ಲಿ  ಕಸ್ಬಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹಾಗೂ ಬಿ.ಮೂಡಗ್ರಾಮದ ತಲಪಾಡಿಯಲ್ಲಿ ವೈದ್ಯರೊಬ್ಬರ ಸಹಿತ ಇಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ತಾಲೂಕಿನಲ್ಲಿ ಒಟ್ಟು 9 ಮಂದಿಗೆ  ಕೊರೋನ ಪಾಸಿಟಿವ್ ದೃಢಪಟ್ಟಿದೆ.  ಇದರಲ್ಲಿ ಗೋಳ್ತಮಜಲಿನ ಸಾಮಾಜಿಕ ಕಾರ್ಯಕರ್ತ,ಬೀಡಿ ಉದ್ಯಮಿಯು ಸೇರಿದ್ದಾರೆ.  ಪೆರ್ನೆಯ 45 ವರ್ಷದ ಮಹಿಳೆ, ಕಾರಿಂಜೆಯ 40 ವರ್ಷದ ಮಹಿಳೆ, ಬಿ.ಸಿ.ರೋಡ್ ತಲಪಾಡಿಯ 55 ವರ್ಷದ ಪುರುಷ,,ಬಿ.ಸಿ.ರೋಡ್ ತಲಪಾಡಿಯ 40 ವರ್ಷದ ಮಹಿಳೆ,  ಪುದುವಿನ 36 ವರ್ಷದ ಪುರುಷ, ಬಂಟ್ವಾಳ ಮುಖ್ಯ ರಸ್ತೆಯ 62 ವರ್ಷದ ಪುರುಷ, ಗೋಳ್ತಮಜಲುವಿನ 60 ವರ್ಷದ ಪುರುಷ, ಪಣಿಕಲ್ಲುವಿನ 68 ವರ್ಷದ ಮಹಿಳೆ,ಮೂಲರಪಟ್ಣದ 35 ವರ್ಷದ ಪುರುಷ ಸೋಂಕಿತರು. ಇದರೊಂದಿಗೆ ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿದ್ದು, ಒಟ್ಟಾರೆಯಾಗಿ ಬಂಟ್ವಾಳ ತಾಲೂಕಿನಲ್ಲಿ 100ಕ್ಕೂ ಅಧಿಕ ಮಂದಿಗೆ ಸೋಂಕು ಬಾಧಿಸಿದಂತಾಗಿದೆ.    ಮುಂದುವರಿದ ಬಂದ್ :   ಪರಂಗೀಪೇಟೆ ಸಹಿತ ಪುದು ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರವು ಮಧ್ಯಾಹ್ನದ ಬಳಿಕ ಅಂಗಡಿ,ಮುಂಗಟ್ಟುಗಳು ಸದವಯಂಪ್ರೇರಿತವಾಗಿ ಮುಚ್ಚಿದ್ದು,ಆಟೋರಿಕ್ಷಾ,ಬಾಡಿಗೆ ಕಾರು ವಾಹನ ಸಂಚಾರವು ಸ್ಥಗಿತಗೊಂಡಿತ್ತು. ಡಿಸ್ಚಾಜ್೯ : ಕೊರೋನ ಪಾಸಿಟಿವ್ ದೃಢ ಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು  ಸಂಪೂರ್ಣ ಗುಣಮುಖವಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಆಗಮಿಸಿದ್ದಾರೆ.ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು,

ಕೋವಿಡ್ ಬಗ್ಗೆ ಯಾವುದೇ ಭಯ ಬೇಡ,
ಎಚ್ಚರವಿರಲಿ,ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *