ಬಂಟ್ವಾಳ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ 29 ಕೋ.ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಜು.15 ರಂದು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರವೇರಿಸಲಿರುವರು.
14 ರೂ.ವೆಚ್ಚದಲ್ಲಿ ಗೋಳ್ತಮಜಲು-ಮಂಚಿಕಟ್ಟೆ-ನೀರಬೈಲು-ಕೇ ಶವನಗರ- ಅಮ್ಟೂರು ರಸ್ತೆ, 9 ಕೋ.ರೂ.ವೆಚ್ಚದಲ್ಲಿ ಕೊಳ್ನಾಡು – ಬೊಲ್ಪಾದೆ -ಮಾದರಮೂಲೆ ರಸ್ತೆ, 6 ಕೋ.ರೂ.ವೆಚ್ಚದಲ್ಲಿ ಕನ್ಯಾನ-ನೆಕ್ಕರೆಕಾಡು-ಬಾಳೆಕೋಡಿ- ಅಕ್ಕರೆಕೋಡಿ-ಬೇರಿಪದವು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
