ಬಂಟ್ವಾಳ: ಕೋವಿಡ್ -೧೯ ನಿಂದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಶೀಘ್ರ ಗುಣಮುಖರಾಗಬೇಕು ,ಅವರ ಆರೋಗ್ಯವೃದ್ದಿಯಾಗಬೇಕು ಹಾಗೂ ಅವರ ಕುಟುಂಬ ಸಂಪೂರ್ಣ ಗುಣಮುಖವಾಗಿ ಮನೆಗೆ ಮರಳುವಂತೆ ಇಂಟಕ್ ಕಾರ್ಯಕರ್ತರು ಬಿ.ಸಿ.ರೊಇಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು‌.
14-44-15-WhatsApp-Image-2020-07-06-at-13.51.34-1ಜಿಲ್ಲಾ ಇಂಟಕ್ ಪ್ರ.ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ನೇತೃತ್ವದಲ್ಲಿ ಪೂಜಾರಿಯವರ ಕುಟುಂಬದ ಪರವಾಗಿ ಶ್ರೀ ದೇವಿಗೆ ಹೂವಿನ ಪೂಜೆಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್,ಪ್ರ.ಕಾರ್ಯದರ್ಶಿ ಸುರೇಶ್ ಪೂಜಾರಿ ಜೋರ,ಸೋಮನಾಥ ಚಂಡ್ತಿಮಾರ್,ಗಣೇಶ್ ನಾಯ್ಕ್ ,ಸಂತೋಷ್ ಕುಮಾರ್,ಲೋಕೇಶ್ ಸುವರ್ಣ,ರಂಜಿತ್ ಪೂಜಾರಿ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *