ಬಂಟ್ವಾಳ: ಕೊರೋನ ವೈರಸ್ ಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ವ್ಯಕ್ತಿಯೊಬ್ಬರು ಬಲಿಯಾಗಿದ್ದು,ಇದರೊಂದಿಗೆ ತಾಲೂಕಿನ ಮೃತರ ಸಂಖ್ಯೆ 5 ಕ್ಕೆರಿದೆ. ಕಿಡ್ನಿ,ಲಿವರ್,ಟಿ.ಬಿ.ಖಾಯಿಲೆಯಿಂದ ಬಳಲುತ್ತಿದ್ದ ಇವರು ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Corona_a_blessingನಾಲ್ಕುದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅಲ್ಲಿ ತಪಾಸಣೆಗೊಳಪಡಿಸಿದಾಗ ಕೊರೋನ ಸೋಂಕು ಪತ್ತೆಯಾಗಿತ್ತ.ನಂತರ ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತಿತ್ತು.ಇದೀಗ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇದೀಗ ಇವರಿಗೆ ಚಿಕಿತ್ಸೆ ನೀಡಿದ ಕಲ್ಲಡ್ಕದ ಖಾಸಗಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.ಇವರಿಗೆ ಸೋಂಕಿನ ಮೂಲ ಯಾವುದು ಎಂದು ದೃಢವಾಗಿಲ್ಲ. ಆಧಾರಸ್ತಂಭವಾಗಿದ್ದರು: ಕಡುಬಡತನದ ಇವರ ಕುಟುಂಬಕ್ಕೆ ಮೃತರೇ ಆಧಾರ ಸ್ತಂಭವಾಗಿದ್ದರು.ಇವರ ಒರ್ವ ಮಗ ಸದ್ಯ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾನೆ.ತಂದೆಯ ಸಾವಿನ ಮಧ್ಯೆಯು ಈತ ಪರೀಕ್ಷೆ ಬರೆಯಬೇಕಾದ ಸನ್ನಿವೇಶದಲ್ಲಿದ್ದಾನೆ.ಇಬ್ಬರು ಪುತ್ರಿಯರು ಇದ್ದಾರೆ,ಒಪ್ಪತ್ತಿನ ಊಟಕ್ಕು ಪರದಾಡಬೇಕಾದ ಸ್ಥಿತಿ ಈ ಕುಟುಂಬದ್ದಾಗಿದೆ.

By suddi9

Leave a Reply

Your email address will not be published. Required fields are marked *