ಬಂಟ್ವಾಳ : ಇಲ್ಲಿಯ ರಥಬೀದಿಯಲ್ಲಿರುವ ಹೊಟೇಲ್ ವೊಂದರ ಮಾಲಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪುರವಾಸಿಗಳು ಮತ್ತೆ ಆತಂಕಕ್ಕೀಡಾಗಿದ್ದಾರೆ. ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆಗೊಳಪಡಿಸಿದಾಗ ಕೊರೋನ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಅವರ ಹೊಟೇಲ್ ಮತ್ತು ಮನೆಯನ್ನು ಬುಧವಾರ ಸೀಲ್ ಡೌನ್ ಮಾಡಲಾಗಿದ್ದು,ಪುರಸಭೆಯ ವತಿಯಿಂದ ಹೊಟೇಲ್ ಸುತ್ತಮುತ್ತ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಅವರ ಪತ್ನಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಕಳೆದ ಎರಡು ತಿಂಗಳ ಕಾಲ ನೆಮ್ಮದಿಯಲ್ಲಿದ್ದ ಬಂಟ್ವಾಳ ಕಸ್ಬಾದಲ್ಲಿ ಮತ್ತೆ ಕೊರೋನ ಅರ್ಭಟ ಶುರುವಾಗಿದೆ.ಎರಡುದಿನಗಳ ಹಿಂದೆ ಕಸ್ಬಾ ಗ್ರಾಮದ ಲೊರೆಟ್ಟೋಪದವಿಗೆ ಸಮೀಪದ ಬಾರೆಕಾಡಿನ ಮಹಿಳೆಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು.
ಎಚ್ಚರಿಕೆಯಿಂದ ಇರಿ: ಶಾಸಕ ನಾಯ್ಕ್ ಮನವಿ ;
ರಾಜ್ಯ ಮತ್ತು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮಿತಿಮೀರಿ ಹರಡುತ್ತಿರುವುದರಿಂದ ಜನರು ಎಚ್ಚರಿಕೆ ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಬಂಟ್ವಾಳ ತಾಲೂಕಿನ ಜನರಲ್ಲಿ ಮನವಿ ಮಾಡಿದ್ದಾರೆ.ಯಾವುದೇ ಕಾರಣಕ್ಕೂ ಅನಗತ್ಯವಾಗಿ ತಿರುಗಾಡ ಬೇಡಿ, ಮಾಸ್ಕ್ ಧರಿಸದೆ ಮನೆಯಿಂದ ಹೊರಹೋಗಬೇಡಿ,ಮನೆಯಲ್ಲಿರುವ ಚಿಕ್ಕ ಮಕ್ಕಳು ಹಾಗೂ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸಿ,ಮಕ್ಕಳು ಹಾಗೂ ಹಿರಿಯ ನಾಗರೀಕರು ತಿರುಗಾಡದಂತೆ ನೋಡಿಕೊಳ್ಳಿ,ಆರೋಗ್ಯದ ಸಮಸ್ಯೆ ಕಂಡಬಂದಲ್ಲಿ ಕೂಡಲೇ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಆರೋಗ್ಯ ತಪಾಸಣೆಗೆ ಒಳಪಡಿಸಿಕೊಂಡುಅಧಿಕಾರಿಗಳೊಂದಿಗೆ ಸಹಕರಿಸಿ,ನಿಮ್ಮ ಆರೋಗ್ಯದ ಬಗ್ಗೆ ಜಾಗೃತೆವಹಿಸುವಂತೆ ಶಾಸಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
