ಬಂಟ್ವಾಳ : ತಾಲೂಕಿನ  ಮೆಲ್ಕಾರ್  ರಾಷ್ಟ್ರೀಯ ಹೆದ್ದಾರಿ ಸಮೀಪದ ಅಮ್ಟೂರು ತಾರಾಬರಿ ಎಂಬಲ್ಲಿ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯೊಂದು ವಾಹನವೊಂದಕ್ಕೆ ಸೈಡ್ ಕೊಡಲು ಹೋಗಿ  ಕೆಳಗೆ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಮಂಗಳವಾರ  ನಡೆದಿದೆ. ಘಟನೆಯಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
IMG-20200701-WA0011ಅಗಲ ಕಿರಿದಾದ ಈ ರಸ್ತೆಯಲ್ಲಿ ಪ್ರತಿನಿತ್ಯ ಬಸ್ ಸಹಿತ ಘನ ಹಾಗೂ ಇತರೆ ವಾಹನಗಳು ಸಂಚರಿಸುತ್ತಿದೆ.ಈ ರಸ್ತೆ ಬದಿಗೆ ತಡೆಗೋಡೆ ಇಲ್ಲದಿದ್ದು,ಈಗಾಗಲೇ ಹಲವು ವಾಹನಗಳು ಇಲ್ಲಿ ಉರುಳಿ ಬಿದ್ದ ಉದಾಹರಣೆಗಳು ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಹಲವು ಸಮಯದಿಂದ ಇಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ  ಸ್ಥಳೀಯರದ್ದಾಗಿದ್ದು,  ಇದೀಗ ಮತ್ತೆ ಈ ಬೇಡಿಕೆ  ಸ್ಥಳೀಯ ನಾಗರಿಕರಿಂದ ಕೇಳಿ ಬಂದಿದೆ.
 IMG-20200701-WA0008

By suddi9

Leave a Reply

Your email address will not be published. Required fields are marked *