ಬಂಟ್ವಾಳ : ಬೆಂಗಳೂರಿನಲ್ಲಿ ಗುರುವಾರ ನಡೆದ ಕೆ. ಪಿ. ಸಿ. ಸಿ.ಯ ನೂತನ ಅಧ್ಯಕ್ಷರಾಗಿಶಾಸಕ,ಮಾಜಿ ಸಚಿವ  ಡಿ.ಕೆ ಶಿವಕುಮಾರ್ ರವರ ಪದಗ್ರಹಣ ಸಮಾರಂಭವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ನೇರ ಪ್ರಸಾರದಲ್ಲಿ ರಾಜ್ಯದಾದ್ಯಂತ ಕಾರ್ಯಕರ್ತರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಮಾಜಿ  ಸಚಿವರಾದ ಬಿ. ರಮಾನಾಥ ರೈ ಅವರು ಕಾರ್ಯಕರ್ತರ ಜೊತೆ ಬಂಟ್ವಾಳ ತಾ.ನ  ಕಳ್ಳಿಗೆ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿಯೇ ಕುಳಿತು ವೀಕ್ಷಿಸಿದರು.

IMG-20200702-WA0048ಅವರ ಮನೆಯ ವರಾಂಡದಲ್ಲಿ ಚಪ್ಪರ ಹಾಕಿ ಟಿ.ವಿ.ಪರದೆಯ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರ ಪದಗ್ರಹಣದ  ನೇರ ಪ್ರಸಾರ ವೀಕ್ಷಿಸಿದರಲ್ಲದೆ ಕಾರ್ಯಕರ್ತರ ಜೊತೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

IMG-20200702-WA0052ಈ ಸಂದರ್ಭದಲ್ಲಿ ಪಕ್ಷದ ಬಂಟ್ವಾಳ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್, ಸುರೇಶ ಕೋಟ್ಯಾನ್, ತಾಲೂಕು ಪಂಚಾಯತ್ ಸದಸ್ಯ ಶಿವಪ್ರಸಾದ್ ಕನಪಾಡಿ,ವಲಯ ಅಧ್ಯಕ್ಷ ವಿಜಯ್ ಪಚ್ಚಿನಡ್ಕ, ದಿವಾಕರ ಪಂಬದೆಬೆಟ್ಟು, ಮಧುಸೂದನ್ ಶೆಣೈ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ, ಪಂಚಾಯತ್ ಸದಸ್ಯರಾದ ರಮೇಶ್ ಮುಗೇರ,  ಮಧುಸೂದನ್ ಶೆಣೈ, ಭಾಗೀರಥಿ,ಯುವ ಕಾಂಗ್ರೆಸ್ ನ ಯತೀಶ್ ಕಳ್ಳಿಗೆ, ಬೂತ್ ಅಧ್ಯಕ್ಷ ಜಗದೀಶ್ ಕಂಜತ್ತುರು,ಲೋಹಿತ್ ಕಳ್ಳಿಗೆ ಗ್ರಾಮದ  ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು‌. ಹಾಗೆಯೇ ಬಂಟ್ವಾಳ ಕ್ಷೇತ್ರದ ಪಾಣೆಮಂಗಳೂರು,ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ವಿವಿದೆಡೆಯಲ್ಲು ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿಯ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ವೀಕ್ಷಿಸಿದರು.

By suddi9

Leave a Reply

Your email address will not be published. Required fields are marked *