ವಿಶೇಷ ಮಕ್ಕಳ ಶಾಲೆಗಳ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗೆ ಮನವಿ
ಸುದ್ದಿ9 ಮಂಗಳೂರು;
ವಿಶೇಷ ಮಕ್ಕಳ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕನರ್ಾಟಕ ಸಕರ್ಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಕನರ್ಾಟಕ ರಾಜ್ಯ ವಿಶೇಷ ಶಿಕ್ಷಕ ಹಾಗು ಶಿಕ್ಷಕೇತರ ಸಂಘದ ಪದಾಕಾರಿಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮುಂದಿನ ಬಜೆಟ್ನಲ್ಲಿ ವಿಶೇಷ ಮಕ್ಕಳ ಶಾಲೆಗಳಿಗೆ ಗರಿಷ್ಠ ಮೊತ್ತ ಮೀಸಲಿಡಬೇಕು ಎಂದು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 120ರಿಂದ 130 ವಿಶೇಷ ಮಕ್ಕಳ ಶಾಲೆಗಳು ಸಕರ್ಾರದಿಂದ ಪೂರ್ಣ ಪ್ರಮಾಣದ ಅನುದಾನ ಪಡೆಯದೆ ಸಂಕಷ್ಟದಲ್ಲಿದೆ. 1982ರ ಅನುದಾನ ನೀತಿ ಸಂಹಿತೆ ಅಡಿಯಲ್ಲಿ ರಾಜ್ಯದ ಕೇವಲ 8 ಶಾಲೆಗಳು ಮಾತ್ರ ಅನುದಾನ ಪಡೆಯುತ್ತಿದೆ.
ಶಿಶುಕೇಂದ್ರೀಕೃತ ಶಿಕ್ಷಣ ನೀತಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹೀಗಾಗಿ ಮಕ್ಕಳಿಗೆ ವಿಶೇಷ ಶಾಲೆಗಳಲ್ಲಿ ವೈಯಕ್ತಿಕ ಶಿಕ್ಷಣ ಯೋಜನೆಯಡಿ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಈ ಯೋಜನೆ ಅನ್ವಯ ವಿಶೇಷ ಶಾಲೆಗಳು ಕಾರ್ಯನಿರ್ವಹಿಸಬೇಕಾದರೆ ಸಕರ್ಾರದಿಂದ ಪೂರ್ಣಪ್ರಮಾಣದ ಅನುದಾನದ ಅಗತ್ಯವಿದೆ. ಮೊದಲಾದ ಪ್ರಮುಖ ವಿಚಾರಗಳನ್ನು ಮುಖ್ಯಂತ್ರಿಗಳ ಗಮನಕ್ಕೆ ತರಲಾಯಿತು.
ಕನರ್ಾಟಕ ರಾಜ್ಯ ವಿಶೇಷ ಶಿಕ್ಷಕ ಹಾಗು ಶಿಕ್ಷಕೇತರ ಸಂಘದ ಪ್ರಧಾನ ಕಾರ್ಯದಶರ್ಿ ವಸಂತ್ ಕುಮಾರ್ ಶೆಟ್ಟಿ, ಸಹಕಾರ್ಯದಶರ್ಿ ಉಮೇಶ್ ಕೆ.ಬಿ., ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *