ಕೈಕಂಬ : ಗುರುಪುರ ಕೈಕಂಬದ ರೋಸಾ ಮಿಸ್ತಿಕ ಶಾಲೆಯಲ್ಲಿ ಆಯೋಜಿಸಲಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 12 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದು, ಇವರಲ್ಲಿ 10 ಮಂದಿ ವಲಸೆ ವಿದ್ಯಾರ್ಥಿಗಳು, ಒಬ್ಬರು ಹೋಂ ಕ್ವಾರಂಟೈನ್ ಮತ್ತು ಒಬ್ಬರು ಪರೀಕ್ಷೆಗೆ ಗೈರು ವಿದ್ಯಾರ್ಥಿ ಒಳಗೊಂಡಿದ್ದಾರೆಂದು ಎಂದು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೊಲಿಟಾ ತಿಳಿಸಿದರು.25vprosamistica

ದಕ್ಷಿಣ ಶಿಕ್ಷಣ ವಲಯದ ಮತ್ತೊಂದು ಎಸ್ಸೆಸ್ಸೆಲ್ಸಿ ಕೇಂದ್ರವಾದ ಎಡಪದವು ವಿವೇಕಾನಂದ ಕಾಲೇಜಿನಲ್ಲಿ ಮೊದಲ ದಿನ ಆರು ಶಾಲೆಗಳ ಎಲ್ಲ 251 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮುತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ 139ರಲ್ಲಿ 136 ವಿದ್ಯಾರ್ಥಿಗಳು ಹಾಜರಾಗಿದ್ದರು. ರೋಸಾ ಮಿಸ್ತಿಕಾ ಶಾಲೆಯಲ್ಲಿ 445ರಲ್ಲಿ 433 ವಿದ್ಯಾರ್ಥಿಗಳು ಹಾಜರಾಗಿದ್ದರು.ಈ ಕೇಂದ್ರದ ಗುರುಪುರ ಸರ್ಕಾರಿ ಹೈಸ್ಕೂಲ್‍ನ ಒಬ್ಬ ವಿದ್ಯಾರ್ಥಿ ಹೋಂ ಕ್ವಾರಂಟೈನ್ ಆಗಿದ್ದಾನೆ ಎಂದು ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ರೂಪಾ ಡಿ ಎನ್ ತಿಳಿಸಿದರು.gur-june-25-edapadau centre

ದಕ್ಷಿಣ ಶಿಕ್ಷಣ ವಲಯದ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸ್ ಮಾಡಲಾಯಿತು. ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೆಸೆಯಲ್ಲಿ ಶಾಲಾ ಆವರಣ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಶಾಲಾ ಶಿಕ್ಷಕರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿಗಳು ಕೊರೊನಾ ಭೀತಿ ಬಿಟ್ಟು ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಮಾಹಿತಿ ನೀಡಿ ಹಾರೈಸಿದರು.

By suddi9

Leave a Reply

Your email address will not be published. Required fields are marked *