ಕೈಕಂಬ : ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿರುವ ಗುರುಪುರ ಕೈಕಂಬದ ರೋಸಾ ಮಿಸ್ತಿಕ ಶಾಲೆಯಲ್ಲಿ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕಾ ಕ್ರಮ ಅನುಸರಿಸಲಾಗಿದ್ದು, ಜೂ. 24ರಂದು ಶಾಲೆಗೆ ಭೇಟಿ ನೀಡಿದ ಗುರುಪುರ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿ ಪರಿಶೀಲನೆ ನಡೆಸಿದರು.24vp rosa mistica

ರೋಸಾ ಮಿಸ್ತಿಕ ಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ, ಗುರುಪುರ, ಕಿನ್ನಿಕಂಬಳ, ಕೈಕಂಬದ ಪೋಂಪೈ, ಅಡ್ಡೂರಿನ ಸಹರಾ, ಬಾಮಿ ಹೈಸ್ಕೂಲ್‍ಗಳ ಸಹಿತ ಎಂಟು ಶಾಲೆಗಳ ಒಟ್ಟು 454 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. “ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಎರಡೆರಡು ಬಾರಿ ಸ್ಯಾನಿಟೈಸ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ” ಎಂದು ಶಾಲಾ ಪ್ರಾಧ್ಯಾಪಕಿ ಸಿಸ್ಟರ್ ಲೊಲಿಟಾ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ(ಸಿಆರ್‍ಪಿ) ಶೀಲಾವತಿ ತಿಳಿಸಿದರು.

ಶಾಲೆಯಲ್ಲಿ ಜೂ. 24ರಂದು ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದೇವೆ. ಬಳಿಕ ಜೂ. 25, 27, 29, ಜುಲೈ ಒಂದು ಮತ್ತು 2ರಂದು ಪರೀಕ್ಷೆ ಮುಗಿದ ಬಳಿಕ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್‍ರ್ ಮಾಡಲಾಗುತ್ತದೆ. ಸರ್ಕಾರದ ಆದೇಶದಂತೆ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು ಭೀತಿ ಬಿಟ್ಟು ಧೈರ್ಯದಿಂದ ಪರೀಕ್ಷೆಯಲ್ಲಿ ಬರೆಯುವಂತೆ ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮತ್ತು ಪಿಡಿಒ ಅಬೂಬಕ್ಕರ್ ಶಾಲೆಯಲ್ಲಿದ್ದ ಮಕ್ಕಳಿಗೆ ತಿಳಿಸಿದರು. ಇವರೊಂದಿಗೆ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಶಾಲಾ ದೈಹಿಕ ಶಿಕ್ಷಕ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *