ಕಾಪು: ಕಾಪು ತಾಲೂಕು ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರ್ಮಾಳು ಲಕ್ಷ್ಮೀ  ಜನಾರ್ದನ ದೇವಸ್ಥಾನದ ರಥಬೀದಿ ರಸ್ತೆಯನ್ನು ಇಂದಿಲ್ಲಿ ಸೋಮವಾರ ಅಪರಾಹ್ನ ಮುಂಬಯಿ ಮಹಾನಗರದ ನಾಮಾಂಕಿತ ಸಮಾಜ ಸೇವಕ, ಅಪ್ರತಿಮ ಸಂಘಟಕ, ಉತ್ತರ ಮುಂಬಯಿ (ಬೋರಿವಿಲಿ) ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಇವರ ಸಮಾಕ್ಷಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಜಿ ಆರ್.ಮೆಂಡನ್ ಉದ್ಘಾಟಿಸಿದರು.Yermal Temple Road 1

Yermal Temple Road 2ಶಾಸಕರ ಅನುದಾನದ ರೂಪಾಯಿ 5 ಲಕ್ಷ ಮೊತ್ತದಲ್ಲಿ ನಿರ್ಮಿತ ಈ ರಸ್ತೆಯನ್ನು ಶಾಸಕ ಲಾಲಜಿ ಮೆಂಡನ್ ನಿರ್ಮಿಸಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಮುಂಬಯಿ ಕಸ್ಟಮ್ಸ್‍ನ ನಿವೃತ್ತ ಎಸಿಪಿ ರೋಹಿತ್ ಹೆಗ್ಡೆ, ಅಶೋಕರಾಜ್ ಅರಸ, ಕಿಶೋರ್ ಶೆಟ್ಟಿ ಎರ್ಮಾಳ್, ಶ್ರೀಪ್ರಸಾದ್ ಶೆಟ್ಟಿ ಎರ್ಮಾಳ್, ಶೀಲಾ ಕೆ. ಶೆಟ್ಟಿ ಎರ್ಮಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.Yermal Temple Road 3

By suddi9

Leave a Reply

Your email address will not be published. Required fields are marked *