ಬಂಟ್ವಾಳ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೋಲೀಸರು ಕೋಳಿ , ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದವರನ್ನು ವಶಕ್ಕೆ ಪಡೆದುಕೊಂಡ ಘಟನೆ ಪೊಳಲಿ ಯ ಪಡ್ಯಾಪು ಎಂಬಲ್ಲಿ ಶನಿವಾರ ನಡೆದಿದೆ.

ಪೊಳಲಿ ಸಮೀಪದ ಪಡ್ಯಾಪು ಸ್ಮಶಾನದ ಗುಡ್ಡೆಯೊಂದರಲ್ಲಿ ಪರವಾನಿಗೆ ಇಲ್ಲದೇ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಗ್ರಾಮಾಂತರ ಪೋಲಿಸರು ಸ್ಥಳದಲ್ಲಿದ್ದ ಸುಮಾರು 4800 ಮೌಲ್ಯದ 12 ಕೋಳಿ, 6ಜನ ಹಾಗೂ 2800 ನಗದು ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್. ಐ.ಪ್ರಸನ್ನ, ಎ.ಎಸ್. ಐ.ಗಳಾದ ರಾಧಾಕೃಷ್ಣ,ವಿಶ್ವನಾಥ ರೈ, ಸಿಬ್ಬಂದಿಗಳಾದ ಜನಾರ್ದನ, ವಾಸು ನಾಯ್ಕ್ , ಶಿವಕುಮಾರ್, ಪುನೀತ್ ಕುಮಾರ್, ಸೋಮಶೇಖರ್ ಭಾಗವಹಿಸಿದ್ದ ರು.
ದಾಳಿಯ ವೇಳೆ ವಶಪಡಿಸಿಕೊಂಡ ಕೋಳಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಏಲಂ ಮಾಡಲಾಯಿತು.
