ಬಂಟ್ವಾಳ:ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಬೀಯಪಾದೆ ಎಂಬಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ  ಕಸಾಯಿಕಾಣೆಗೆ  ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ನೇತೃತ್ವದ ತಂಡ ಜಾನುವಾರುಗಳ ಸಹಿತ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸರಪಾಡಿಯಲ್ಲಿ ರಾತ್ರಿ ನಡೆದಿದೆ.87dbd49c-30c7-4795-b930-fb347ea27e9f

 ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ತುಂಬಿಸಿಕೊಂಡು ಅಜ್ಞಾತ ಸ್ಥಳದಲ್ಲಿ  ವದೆ ಮಾಡಲು ಸಾಗಾಟ ಮಾಡುವ ವೇಳೆ ರೆಡ್ ಹ್ಯಾಂಡ್ ಅಗಿ ಪೋಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಪಿಕಾಫ್
ಚಾಲಕ ಆರೋಪಿ ಮೊಹಮ್ಮದ್‌ ಹನೀಫ್ ಎಂಬಾತನನ್ನು  ಪೋಲೀಸರು ಬಂಧಿಸಿದ್ದಾರೆ .ಉಳಿದಂತೆ ಇಬ್ರಾಹಿಂ ಮತ್ತು ಬಾಲಕೃಷ್ಣ ಪೂಜಾರಿ ಅವರ ಮೇಲೆ ಗೋವಧೆ ಪ್ರತಿಬಂಧಕ ಕಾಯಿದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸುಮಾರು 10.500 ಸಾವಿರ ರೂ ಮೌಲ್ಯದ ಒಂದು ದನ, ಒಂದು ಹೋರಿ, ಒಂದು ಗಂಡು ಕರು ಹಾಗೂ ಒಂದು ಹೆಣ್ಣು ಕರು ಸಹಿತ 2 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.6750d2e7-b68a-4130-a029-e5d55a289cc0

ಕಣ್ಣೂರು ಬಿರ್ಪುಗುಡ್ಡೆ ಇಬ್ರಾಹಿಂ ಎಂಬವರು ಕೊಟ್ಟುಂಜ ಬಾಲಕೃಷ್ಣ ಪೂಜಾರಿ ಅವರಿಂದ ಖರೀದಿ ಮಾಡಿದ ಜಾನುವಾರುಗಳನ್ನು ಪರವಾನಿಗೆ ರಹಿತವಾಗಿ ಪಿಕಪ್ ವಾಹನ ಚಾಲಕ ಮಹಮ್ಮದ್ ಹನೀಫ್ ವದೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ.ಪೋಲೀಸರ ಸಕಾಲಿಕ ಸಮಯಪ್ರಜ್ಞೆಯಿಂದ ದನಗಳ ವದೆ ತಪ್ಪಿದೆ.ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ನೇತೃತ್ವದ ಕಾರ್ಯಾಚರಣೆ ಯಲ್ಲಿ .ಎಸ್.ಐ.ಗಳಾದ ರಾಧಾಕೃಷ್ಣ, ಸುಂದರ್ ಸಿಬ್ಬಂದಿ ಗಳಾದ ಕಿರಣ್ ಹಾಗೂ ಚಿರಿರಾನ್ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *