ಕೈಕಂಬ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶನಿವಾರ(ಜೂ. 20) ಮುಡಿಪು ಶ್ರೀ ಗೋಪಾಲಕೃಷ್ಣ ದೇವಳದ ವೇದಮೂರ್ತಿ ಅಕ್ಷಯ ಭಟ್ ಪೌರೋಹಿತ್ಯದಲ್ಲಿ ಶ್ರೀ ಮಹಾ ಕಾಲಭೈರವ ದೇವರ ಮೂರ್ತಿ ಪ್ರತಿಷ್ಠಾಪಿಸಲಾಯಿತು.gur-june-20-kalabairava-2

gur-june-20-kalabairava-4ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಕದ್ರಿ ಜೋಗಿಮಠದ ಶ್ರೀ ನಿರ್ಮಲನಾಥ ಮಹಾರಾಜ್, ಗುರುಪುರ ಜಂಗಮ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿ ಹಾಗೂ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರನ್ನು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕಾರಮೊಗರುಗುತ್ತು ಡಾ. ರವಿರಾಜ ಶೆಟ್ಟಿ ಫಲಪುಷ್ಪ ನೀಡಿ ಗೌರವಿಸಿದರು. ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ, ವೈದ್ಯನಾಥ ಪಾತ್ರಿ ವಕೀಲ ಕೌಡೂರು ಚಂದ್ರಹಾಸ ಪೂಜಾರಿ, ಕಾರಮೊಗರು ಕುಟುಂಬದ ಹಿರಿಯ ವ್ಯಕ್ತಿ ಸದಾನಂದ ಮಲ್ಲಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *