ಮುಂಬೈ : ಮುಂಬೈ ಹೊರವಲಯ ಅಂಬರನಾಥ್ ಚಿಂಚ್ಪಾಡ ಶ್ರೀ ದುರ್ಗಾಕಾಳಿ ದೇವಸ್ಥಾನದ ಸಂಸ್ಥಾಪಕ ಶ್ರೀ ಬಾಲಗಂಗಾಧರ ಸ್ವಾಮಿ ಜೂ. 20ರಂದು ದೈವಾಧೀನರಾದರು.
ದೈವ-ದೇವರು, ಶ್ರೀ ದುರ್ಗಾಕಾಳಿ, ಶ್ರೀ ನಿತ್ಯಾನಂದ ಸ್ವಾಮಿಯ ಭಕ್ತರಾಗಿದ್ದ ಇವರು ಕಳೆದ ಐದು ದಶಕದಿಂದ ಶ್ರೀ ದುರ್ಗಾಕಾಳಿ ದೇವಸ್ಥಾನದ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯೊಂದಿಗೆ ಜನಾನುರಾಗಿಯಾಗಿದ್ದರು. ಮೂಲತಃ ಬಂಟ್ವಾಳ ತಾಲೂಕಿನ ಕುರ್ನಾಡು ಕಂಬ್ಳಪದವಿನವರಾಗಿದ್ದಾರೆ.
