ಕೋವಿಡ್ -19 ಕೊರೋನಾ ವ್ಶೆರಸ್ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಸೀಲ್‍ಡೌನ್ ಏರಿಯಾದ, ಹಾಗೂ ಕ್ವಾರಂಟೈನ್ ಸ್ಥಳಗಳಿಂದ ಕಸ ಸಂಗ್ರಹದ ಕೆಲಸ ನಿರ್ವಹಿಸುತ್ತಿರುವ ಬಂಟ್ವಾಳ ಪುರಸಭೆಯ 40 ಮಂದಿ ಸ್ವಚ್ಚತಾ ಕೆಲಸಗಾರರಾದ ಪೌರಕಾರ್ಮಿಕರನ್ನು ಗುರುತಿಸುವ ಕೆಲಸವನ್ನು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಗ್ರಾಮೀಣ ಕೂಟ ಸಂಸ್ಥೆಯ ಬಂಟ್ವಾಳ ಶಾಖೆ ವತಿಯಿಂದ ಪುರಸಭೆ ಬಂಟ್ವಾಳದಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಲೀನಾ ಬ್ರಿಟ್ಟೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಕೂಟ ಸಂಸ್ಥೆಯ ಮ್ಯಾನೇಜರ್ ಗಿರೀಶ್ ಹಾಗೂ ಮಹಾದೇವ, ಪುರಸಭೆಯ ವ್ಯವಸ್ಥಾಪಕಿ ಶ್ರೀಮತಿ ಲೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಸಭೆಯ 40 ಮಂದಿ ಪೌರಕಾರ್ಮಿಕರಿಗೆ ಗ್ರಾಮೀಣ ಕೂಟ ಸಂಸ್ಥೆಯ ವತಿಯಿಂದ ಆಹಾರ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು, ಹಾಗೂ ಪುರಸಭಾ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮೀಣ ಕೂಟ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಪ್ರಭಾರ ಸಮುದಾಯ ಸಂಘಟಣಾಧಿಕಾರಿ ಶ್ರೀಮತಿ ಉಮಾವತಿಯವರು ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.
