ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೆಲ್ಕಾರಿನಲ್ಲಿ ವಾಸವಾಗಿರುವ ಸಂಜೀವ ಟೈಲರ್ ಅನಾರೋಗ್ಯ ಪೀಡಿತರಾಗಿದ್ದು ಮಕ್ಕಳಿಲ್ಲದ ಅವರು ಪತ್ನಿಯ ಜೊತೆ ವಾಸವಾಗಿದ್ದು ಅವರಿಗೆ “ ಇಸ್ರೇಲ್ ಫ್ರೆಂಡ್ಸ್ ಸಂಸ್ಥೆ” ಅಧ್ಯಕ್ಷ ಹಾಗೂ ಸದಸ್ಯರಿಂದ ಕೊಡಮಾಡಿದ 10000/- ನಗದನ್ನು ಹಾಗೂ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬೋಳಂಗಡಿಯ ಇಂದಿರಾ ಕುಮಾರಿಯವರು ಕೂಡಾ ಕಿಡ್ನಿ ವೈಫಲ್ಯದಿಂದ ಆರೋಗ್ಯ ವಂಚಿತರಾಗಿದ್ದು ಅವರಿಗೂ ರೂ 10000/- ನಗದನ್ನು ಮತ್ತು ಅಡುಗೆ ಮಾಡುವ ಸಂದರ್ಭದಲ್ಲಿ ಬೆಂಕಿ ತಗಲಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುವ ಮಹಿಳೆಗೆ ರೂ 5000/- ನ್ನು ನಗದಾಗಿ ನೀಡಲಾಗಿದೆ.

ಅನಾರೋಗ್ಯ ಪೀಡಿತರಿಗೆ ಮೆಲ್ಕಾರ್ ಯುವ- ಸಂಗಮದ ಮೂಲಕ ಸಹಾಯಧನ ವಿತರಣೆ

IMG-20200616-WA0021
ಯುವ ಸಂಗಮ ಮೆಲ್ಕಾರ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂತೋಷ್ ಕುಮಾರ್ ಈಗ ಇಸ್ರೇಲಿನಲ್ಲಿ ಉದ್ಯೋಗದಲ್ಲಿದ್ದು : ಇಸ್ರೇಲ್ ಫ್ರೆಂಡ್ಸ್” ನ ಅಧ್ಯಕ್ಷರಾದ ದಿನಕರ ಪುತ್ರನ್ ನೇತೃತ್ವದಲ್ಲಿ ರೂ 25000/- ಮೊತ್ತವನ್ನು ಯುವ ಸಂಗಮದ ಯುವ ಅಧ್ಯಕ್ಷರಾದ ಓಂ ಪ್ರಕಾಶ್ ಆಚಾರ್ಯ ನೇತೃತ್ವದಲ್ಲಿ ವಿತರಿಸಲಾಯಿತು.

IMG-20200616-WA0020ಕಾರ್ಯಕ್ರಮದಲ್ಲಿ ಯುವ ಸಂಗಮದ ಮಾಜಿ ಅಧ್ಯಕ್ಷರುಗಳಾದ ಸತೀಶ್ ಏಲಬೆ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ , ವಿಠಲ್ ಶೆಣೈ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಣೈ ಮತ್ತು ಗೌರವಾಧ್ಯಕ್ಷರಾದ ಎಂ.ಎನ್.ಕುಮಾರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *