ಉಡುಪಿ : ವಿಶ್ವ ರಕ್ತದಾನಿಗಳ ದಿನಾಚರಣೆ ಇದರ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಕುಂದಾಪುರ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ “ರಕ್ತದಾನ ಪುರಸ್ಕಾರ”. ಗೌರವವನ್ನು ರಕ್ತದಾನಿ ರಾಘವೇಂದ್ರ ಪ್ರಭು,ಕವಾ೯ಲು ಸಹಿತ 5 ಜನರಿಗೆ ಪ್ರಧಾನ ಮಾಡಲಾಯಿತು.
ಕಾಯ೯ಕ್ರಮದಲ್ಲಿ ಸಹಾಯಕ ಆಯುಕ್ತ ಕೆ.ರಾಜು, ಡಾII ಉಮೇಶ್ ಪುತ್ರನ್, ಭಾರತೀಯ ವೈದ್ಯ ಸಂಘ ಅಧ್ಯಕ್ಷೆ ಡಾ|| ಶ್ರೀದೇವಿ ಕಟ್ಟೆ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ” ನಾಗಭೂಷಣ್ ಉಡುಪ, ಸಭಾಪತಿ ಜಯಕರ ಶೆಟ್ಟಿ ಮುಂತಾದವರಿದ್ದರು.

