ಬಂಟ್ವಾಳ : ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲನೇ ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಬರೆದಂತಹ ಸಂದೇಶ ಪತ್ರವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬುಧವಾರ ಮನೆ,ಮನೆ ವಿತರಣೆಗೆ ಚಾಲನೆ ನೀಡಿದರು.IMG-20200610-WA0049

ಬಂಟ್ವಾಳ ಕ್ಷೇತ್ರದ ಕರಿಯಂಗಳ ಗ್ರಾಮದ  ಬಡಕಬೈಲಿನ ಮನೆಗಳಿಗೆ ಶಾಸಕರು ಭೇಟಿ ನೀಡಿ ಮೋದಿ ಸರಕಾರ ದೇಶದ ಜನತೆಗಾಗಿ ಜಾರಿ ತಂದ ಜನಪರ ಯೋಜನೆ,ಅಯೋಧ್ಯೆ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ, ತ್ರಿವಳಿ ತಲಾಕ್ ನಿಷೇಧ ,ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ನೀಡಿರುವ 370 ವಿಧಿ ರದ್ದತಿ,ಪೌರತ್ವ ಕಾನೂನಿಗೆ ತಿದ್ದುಪಡಿ ಹೀಗೆ ಹಲವು ದಶಕಗಳ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಭಾರತವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ವದೇಶಿ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಲು ಆತ್ಮನಿರ್ಭರ್ ಭಾರತದ ಮೂಲಕ ವಿಶ್ವದಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದಂತಹ ಪ್ರಧಾನಿ  ನರೇಂದ್ರ ಮೋದಿಯವರ ಕಾರ್ಯವೈಖರಿ, ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಿದರು.

IMG-20200610-WA0046ಈ ಸಂದರ್ಭದಲ್ಲಿ ಭೂನ್ಯಾಯ ಮಂಡಳಿ ಸದಸ್ಯ ಸುಕೇಶ್ ಚೌಟ ಬಡಕಬೈಲು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಶೋಕ್, ಗ್ರಾ.ಪಂ ಸದಸ್ಯೆ ಶಕುಂತಳಾ ಮತ್ತಿತರು ಇದ್ದರು.

By suddi9

Leave a Reply

Your email address will not be published. Required fields are marked *