ಬಂಟ್ವಾಳ : ಒಂದೇ ಸೂರಿನಲ್ಲಿ ಉತ್ತಮ ಗುಣಮಟ್ಟದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಅಲ್ ಬಿರ್ರ್ ಶಿಕ್ಷಣ ವ್ಯವಸ್ಥೆಯು ಖ್ಯಾತಿ ಪಡೆಯುತ್ತಿದೆ. ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ಅವಿಷ್ಕರಿಸಲ್ಪಟ್ಟ ಈ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಉನ್ನತ ಪಠಣ ಬೋಧನಾ ರೀತಿ ಭಾರೀ ಬೇಡಿಕೆಯನ್ನು ಪಡೆಯುತ್ತಿದೆ ಎಂದು ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ತಿಳಿಸಿದ್ದಾರೆ.IMG-20200608-WA0024

ಮಿತ್ತಬೈಲ್ ಉಸ್ತಾದ್ ಎಜುಕೇಶನಲ್ ಟ್ರಸ್ಟ್ ನಿಂದ ಬಿ.ಸಿ.ರೋಡ್ ತಲಪಾಡಿಯ ಮಫತ್ಲಾಲ್ ನಲ್ಲಿ ನೂತನವಾಗಿ ಆರಂಭಗೊಂಡಿರುವ ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಶಾಲೆಯನ್ನು  ಉದ್ಘಾಟಿಸಿದ ಬಳಿಕ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.ಅಲ್‌ ಬಿರ್ರ್ ಕರ್ನಾಟಕ ಕೋರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಮಾತನಾಡಿ, ಅಲ್ ಬಿರ್ರ್ ಶಿಕ್ಷಣ ವ್ಯವಸ್ಥೆಯು ಬಹುಮುಖ ಪ್ರತಿಭೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

ಕೆಳಗಿನ ಮಿತ್ತಬೈಲ್ ಅರಫಾ ಮಸೀದಿಯ ಇಮಾಮ್  ಮುಹ್ಸಿನ್ ಫೈಝಿ ದುಅ ಮಾಡಿದರು. ಅತಿಥಿಗಳಾದ ಅಬ್ದುಲ್ ರಹಿಮಾನ್ ಬಸ್ತಿಕೋಡಿ, ಝೆನಿತ್ ಅಹ್ಮದ್, ಫ್ಲಾಗ್ ಝಿರೊ ಡೈರೆಕ್ ಡಾ. ಮುಸ್ತಫಾ‌ ಬಸ್ತಿಕೋಡಿ, ಪಾಲುದಾರರಾದ ಹಂಝ‌ ಬಸ್ತಿಕೋಡಿ, ಶಾಕಿರ್ ಅಹ್ಮದ್, ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *