ಬಂಟ್ವಾಳ: ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಹೊಂಚು ಹಾಕಿ ಕುಳಿತಿದ್ದ ತಂಡವೊಂದು ಬಂಟ್ವಾಳ ನಗರ ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾದ ಘಟನೆ ಪಾಣೆಮಂಗಳೂರಿಗೆ ಸಮೀಪದ ನಂದಾವರದಲ್ಲಿ ಸೋಮವಾರ ನಡೆದಿದ್ದು,ಈ ಸಂಬಂಧ ಪೊಲೀಸರು ಒಂದು ಕಾರು ಹಾಗೂ ಅದರಲ್ಲಿದ್ದ ಮಾರಕಾಸ್ತ್ರವನ್ನು ವಶಪಡಿಸಿದ್ದಾರೆ. ನಂದಾವರ ಹೈಸ್ಕೂಲಿನ ಬಳಿ ಸ್ಥಳಿಯ ನಿವಾಸಿ ಮುಸ್ತಾಫ ಮತ್ತವರ ತಂಡ ಕಾರಿನಲ್ಲಿ ತಲವಾರು,ದೊಣ್ಣೆಯನ್ನು ಇರಿಸಿ ಹೊಂಚುಹಾಕಿ ಕುಳಿತಿತ್ತು ಎಂದು ತಿಳಿದುಬಂದಿದೆ.
ಬಂಟ್ವಾಳನಗರಠಾಣೆಯ ಎಸ್ ಐ ಅವಿನಾಶ್ ಮತ್ತವರ ಸಿಬ್ಬಂದಿಗಳು ರಾತ್ರಿಗಸ್ತು ತಿರುಗುತ್ತಿದ್ದಾಗ ಇವರನ್ನು ಗಮನಿಸಿ ಕಾರನ್ನು ಸ್ಥಳದಲ್ಲೇ ಬಿಟ್ಟು ಮುಸ್ತಾಫ ಮತ್ತವರ ತಂಡ ಪರಾರಿಯಾಗಿದೆ ಎಂದು ಹೇಳಲಾಗಿದೆ.ಅನುಮಾನಗೊಂಡ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ತಲವಾರು ಹಾಗೂ ದೊಣ್ಣೆ ಪತ್ತೆಯಾಗಿದ್ದು,ತಕ್ಷಣ ಕಾರು ಸಹಿ ಮಾರಕಾಸ್ತ್ರವನ್ನು ವಶಪಡಿಸಿದ್ದಾರೆ.ಈ ಬಗ್ಗೆ ಎಸ್ ಐ ಅವರು ಸೋಮೊಟೋ ಪ್ರಕರಣ ದಾಖಲಿಸಿದ್ದಾರೆ.ಮುಸ್ತಾಫ ಹಾಗೂ ಕಣ್ಣೂರಿನ ತಂಡವೊಂದರ ನಡುವೆ ವಯಕ್ತಿಕ ವಿಚಾರದಲ್ಲಿ ವೈಮನಸ್ಸು ಇದ್ದು, ಈ ವಿಚಾರವಾಗಿ ಸಂಚು ರೂಪಿಸಿ ಮುಸ್ತಾಫ ಮತ್ತವರ ತಂಡ ಹೊಂಚುಹಾಕಿ ಕುಳಿತೊರಬೇಕೆಂದು ಶಂಕಿಸಲಾಗಿದೆ
