ಬಂಟ್ವಾಳ: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳಿಗೆ ಯುವಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯ ಬಡಗಕಜೆಕಾರುಗ್ರಾಮದ ಪಾಂಡವರಕಲ್ಲು ರ್ಕುಡೇಲು ಎಂಬಲ್ಲಿ ಸಂಭವಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆ ಮೇ.30 ರಂದು ನಡೆದಿದ್ದು, ಪುಂಜಾಲಕಟ್ಟೆ ಪೋಲಿಸರು ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿದ್ದು,ಇದೀಗ ಗ್ರಾಮಸ್ಥರಿಂದ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗಿದೆ.
ಈ ಘಟನೆಯ ಆರೋಪಿಯನ್ನು ಪಾಂಡವರಕಲ್ಲು ನಿವಾಸಿ ಹೈದರ್ ಎಂದು ಹೆಸರಿಸಲಾಗಿದೆ. ಆರೋಪಿಯು ಮೇ.30 ರಂದು ಸಂಜೆ ಬಾಲಕಿಯ ಮನೆಗೆ ಬಂದು ಆಕೆಯ ತಂದೆಯಲ್ಲಿ ಆಯಾಸದಿಂದ ಹೋರಿಯ ಕರುವಿಗೆ ಒಂದು ಬಕೆಟ್ ನೀರು ಕೇಳಿದ್ದ,ಅಲ್ಲಿಟ್ಟಿದ್ದ ನೀರು ತುಂಬಿದ್ದ ಬಕೆಟ್ ತೆಗೆದುಕೊಂಡು ಹೋಗುವಂತೆ ಬಾಲಕಿಯ ತಂದೆ ತಿಳಿಸಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂದರ್ಭ ಆರೋಪಿ ಬಾಲಕಿಗೆ 10 ರೂ.ನೀಡಲು ಬಂದಾಗ ಆಕೆ ತಿರಸ್ಕರಿಸಿದ್ದು,ಆಗ ಆರೋಪಿ ಬಾಲಕಿಯ ಕೈಹಿಡಿದೆಳೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆನ್ನಲಾಗಿದೆ.ಈ ಸಂದರ್ಭ ಬಾಲಕಿ ಕಿರಿಚಾಡಿದಾಗ ಆರೋಪಿ ಆಕೆಗೆ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾನೆ.ಬಳಿಕ ಬಾಲಕಿಯ ದೂರಿನಂತೆ ಪುಂಜಾಲಕಟ್ಟೆ ಪೋಲಿಸರು ಆರೋಪಿ ವಿರುದ್ದ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
