ಬಂಟ್ವಾಳ: ಹೊರರಾಜ್ಯ,ಹೊರದೇಶದಿಂದ ದ.ಕ.ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕ್ವಾರಂಟೈನ್ ನನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲಾಗಿದ್ದು,ಇದೇ ಮೊದಲಿಗೆ “ಕ್ವಾರಂಟೈನ್ ವಾಚ್”ನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.IMG-20200606-WA0072

ಶನಿವಾರ   ಬಂಟ್ವಾಳ ತಾಲೂಕಿನ ವಿವಿಧ ಕೇಂದ್ರಕ್ಕೆ ಭೇಟಿ ನೀಡಿ,ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರಲ್ಲದೆ ಬಂಟ್ವಾಳ ತಾಪಂನ ಎಸ್ಜಿಎಸ್ ವೈ ಸಭಾಂಗಣದಲ್ಲಿಕೊರೋನಾ ವಾರಿಯಸ್೯ಗಳ ಪ್ರಗತಿಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನೆರೆರಾಜ್ಯ ಮಹಾರಾಷ್ಟ್ರ ಹಾಗೂ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ನಿಗದಿಗೊಳಿಸಿದ ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಅವರು ಮನೆಯಿಂದ ಹೊರಬರಬಾರದು,ಅವರ ಮನೆಯನ್ನು ನಿಗಾ ಇರಿಸುವ ದೆಸೆಯಲ್ಲಿ “ಕ್ವಾರಂಟೈನ್ ವಾಚ್”ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದರು.ಗ್ರಾಪಂ ಅಧಿಕಾರಿಗಳು,ಆಶಾ ಕಾರ್ಯ ಕರ್ತೆಯರಿಗೆ ಈಬಗ್ಗೆ ವಿಶೇಷ ಜವಬ್ದಾರಿಯನ್ನು ನೀಡಲಾಗಿದೆ.

ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಮನೆಯನ್ನು ಗುರುತಿಸಿ ಪ್ರತಿದಿನ ಆಮನೆಗೆ ಆಶಾ ಕಾರ್ಯಕರ್ತೆಯರು,ಗ್ರಾಪಂ ಅಧಿಕಾರಿಗಳು ಆ ವ್ಯಕ್ತಿ ಮನೆಯಲ್ಲೆ ಇರುವ ಕುರಿತು  ಪೋಟೋ ದಾಖಲಾತಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.ಬಂಟ್ವಾಳ ತಾಲೂಕಿನಲ್ಲಿ ಹೊಸದಾಗಿ ಕೊರೋನ ಫಾಸಿಟಿವ್ ಪತ್ತೆಯಾಗಿರುವ ನಾವೂರು,ನೆಟ್ಲಮುಡ್ನೂರು,ಅಮ್ಟೂರು ಗ್ರಾಮಗಳಲ್ಲಿ ವಾಸಿಸುವ ಮನೆಯನ್ನು ಸೀಲ್ ಡೌನ್ ಮಾಡಿ,ಕಂಟೈನ್ಮೆಂಟ್ ಝೋನ್ ನನ್ನಾಗಿ ಗುರುತಿಸಲಾಗಿದೆ ಎಂದರು.

ಶೇ.90 ಪೂರ್ಣ: 

ಮನೆಯಲ್ಲಿರುವ ಪ್ರತಿಯೊಬ್ಬರ ಆರೋಗ್ಯದ ವಿವರವನ್ನು ದಾಖಲಿಸುವ ಹೆಲ್ತ್ ವಾಚ್ ಸರ್ವೇಕಾರ್ಯ ನಡೆದಿದ್ದು,ಇದರ ಮೂಲಕ ಕೋವಿಡ್ ಫಾಸಿಟಿವ್ ಪತ್ತೆಯಾದ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ನೆರವಾಗುತ್ತದೆ ಎಂದ ಅವರು ಬಂಟ್ವಾಳ ತಾಲೂಕಿನಲ್ಲಿ ಶೇ.90 ರಷ್ಟು ಪೂರ್ಣಗೊಂಡಿದೆ.ಕೋವಿಡ್ ನಿಗ್ರಹಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ  ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕೋರಿದರು.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪ ಎಂ.ಜೆ.,ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್,ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್,ತಾಪಂ ಇಒ ರಾಜಣ್ಣ,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು,ಕ್ಷೇತ್ರ ಶಿಕಗಷಣಾಧಿಕಾರಿ ಜ್ಞಾನೇಶ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *