ಉಡುಪಿ :ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್, ಕಿದಿಯೂರು ಉದಯಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಕ್ಲೀನ್ ಉಡುಪಿ ಪ್ರಾಜೆಕ್ಟ್, ಸಕ್ಷಮ, ಜೇಸಿಐ ಉಡುಪಿ ಸಿಟಿ ಸಂಯುಕ್ತ ಆಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನವನ್ನು ಅಜ್ಜರಕಾಡಿನಲ್ಲಿ ಆಚರಿಸಲಾಯಿತು. ಕಿದಿಯೂರು ಉದಯಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅವರು ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಆತ್ಮಾವಲೋಕನ ನಡೆಸಿದರೆ ಪರಿಸರ ರಕ್ಷಣೆಗೆ ನಮ್ಮ ಕೊಡುಗೆ ಏನೆಂಬುದು ಅನಾವರಣಗೊಳ್ಳುತ್ತದೆ. ಭೂಮಿಯಲ್ಲಿನ ಹಸುರು ಪದರವನ್ನು ಹೆಚ್ಚಿಸುವ ಕಾರ್ಯವು ವ್ಯಾಪಕವಾಗಿ ನಡೆದರೆ ಹವಾಮಾನ ವೈಪರೀತ್ಯಗಳು ಮತ್ತು ವಿಕೋಪಗಳು ಕ್ರಮೇಣವಾಗಿ ಕಡಿಮೆಯಾಗಿ ಭೂಮಿಯಲ್ಲಿ ಸಮತೋಲನ ಹೆಚ್ಚುತ್ತದೆ. ಗಿಡಮರಗಳನ್ನು ನಮ್ಮ ಮಕ್ಕಳಂತೆ ಕಾಳಜಿ ವಹಿಸಿ ಸಂರಕ್ಷಿಸಬೇಕಾದ ಅಗತ್ಯತೆ ಇದೆ. ಮುಂದಿನ ಪೀಳಿಗೆಗೆ ಸಸ್ಯ ಶಾಮಲೆ ಎಂಬ ನೈಜ ಅರ್ಥವಿರುವ ಭೂಮಿಯನ್ನು ಹಸ್ತಾಂತರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖಾ ವ್ಯವಸ್ಥಾಪಕರಾದ ಹಫೀಜ್, ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್, ನಿತಿನ್ ಶೇಟ್, ಮುಸ್ತಾಫಾ, ಕ್ಲೀನ್ ಉಡುಪಿ ಪ್ರಾಜೆಕ್ಟ್ ಮುಖ್ಯಸ್ಥ ಡಾ. ಆರ್. ಎನ್. ಭಟ್, ಸಕ್ಷಮ ಅಧ್ಯಕ್ಷೆ ಲತಾ ಭಟ್, ಮಾಜಿ ಸೈನಿಕ ವಾದಿರಾಜ್ ಹೆಗ್ಡೆ, ಸ್ಪಂದನಾ ಸಂಸ್ಥೆಯ ಜನಾರ್ಧನ್, ನಿತೇಶ್ ನಾಯಕ್, ಸಂದೀಪ್ ಮೈಂದನ್, ನಿತ್ಯಾನಂದ ಒಳಕಾಡು, ತಾರನಾಥ್ ಮೇಸ್ತ ಶಿರೂರು, ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ತನುಜಾ ಮಾಬೆನ್, ಕಾರ್ಯದರ್ಶಿ ಉದಯ ನಾಯ್ಕ್, ಜಗದೀಶ್ ಶೆಟ್ಟಿ, ನಾಗರಾಜ್ ಭಂಡಾರ್ಕರ್, ವಿನಯಚಂದ್ರ, ಭರತ್ ಭೂಷಣ್ ಉಪಸ್ಥಿತರಿದ್ದರು.
ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಗಣೇಶ್ ಪ್ರಸಾದ್ ಜಿ. ನಾಯಕ್ ವಂದಿಸಿದರು.
