ಬ್ರಹ್ಮಾವರ:ಸುವರ್ಣ ಎಂಟರ್ ಪ್ರೈಸಸ್ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ಸಹಯೋಗದಲ್ಲಿ ಬ್ರಹ್ಮಾವರ ಸುಮದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯ ಅಧಿಕಾರಿ ರವೀಂದ್ರ ಆಚಾರ್ಯ ಈ ಕರೋನಾದ ಸಂಕಷ್ಟ ಸಮಯದಲ್ಲಿಯೂ ಪರಿಸರ ರಕ್ಷಣೆ ಜಾಗೃತಿ ಮೂಡಿಸುವ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ,ಕೃಷ್ಣಪ್ಪ,ವಾರಂಬಳ್ಳಿ ಗ್ರಾ.ಪಂ ಅದ್ಯಕ್ಷ ನವೀನಚಂದ್ರ ನಾಯಕ್,ಮಾಜಿ ಅದ್ಯಕ್ಷ ನಿತ್ಯಾನಂದ ಬಿ.ಅರ್,ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಅಜಿತ್ ಕುಮಾರ್,ಡಾ||ಮಹೇಶ್ ಐತಾಳ್, ಮಾಜಿ ಜಯಂಟ್ಸ್ ಫೆಡರೇಶನ್ ಅದ್ಯಕ್ಷ ಮಧುಸೂಧನ್ ಹೇರೂರು,ಅದ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ,ಕಾರ್ಯದರ್ಶಿ ಶ್ರೀನಾಥ್ ಕೋಟ,ಅಣ್ಣಯ್ಯದಾಸ್,ಯುವ ವಿಚಾರ ವೇದಿಕೆ ಮಾಜಿ ಅದ್ಯಕ್ಷ ಸುಬ್ರಮಣ್ಯ ಆಚಾರ್ಯ,ವಿವೇಕಾನಂದ ಕಾಮತ್ ಸಿಬ್ಬಂದಿಗಳು ಭಾಗವಹಿಸಿದ್ದರು.ರಾಘವೇಂದ್ರ ಪ್ರಬು ಕರ್ವಾಲು ಸ್ವಾಗತಿಸಿದರು.ಮಧುಸೂಧನ್ ಹೇರೂರು ವಂದಿಸಿದರು.
