ಮುಂಬಯಿ: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್‍ಮೆಂಟ್ ನಿವಾಸಿ ಟ್ರೆಸ್ಸಿ ಡೋಲ್ಫಿ ಮೊಂತೇರೊ (ವೇಗಸ್) ಮುಂಬಯಿ (54.) ಅಲ್ಪ ಕಾಲದ ಅನಾರೋಗ್ಯದಿಂದಾ (ಕಿಡ್ನಿ ವೈಫಲ್ಯದಿಂದ) ಇಂದಿಲ್ಲಿ ಬುಧವಾರ ರಾತ್ರಿ ಅಂಧೇರಿ ಪೂರ್ವದ ಮಹಾಕಾಳಿ ಇಲ್ಲಿನ ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ದರ್ಬೆ ಮೂಲದವರಾಗಿದ್ದ ಮೃತರು ಪತಿ ಡೋಲ್ಫಿ ಮೊಂತೇರೊ, ಸುಪುತ್ರ ಟ್ರೆವರ್ ಮೊಂತೇರೊ ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.ಮೃತರ ಅಂತ್ಯಕ್ರಿಯೆ (ಜೂ.04) ಗುರುವಾರ ಹೋಲಿ ಫ್ಯಾಮಿಲಿ ಇಗರ್ಜಿ, ಚಕಲಾ ಇಲ್ಲಿ ನೆರವೆರಲಿದೆ ಎಂದು ಕುಟುಂಬ ಮೂಲಗ ಳು ತಿಳಿಸಿವೆ.
