ಕುಪ್ಪೆಪದವು: ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗುತ್ತು ಕಂಬಳ ಗದ್ದೆಗೆ, ಮಳೆಹಾನಿ ಯೋಜನೆಯಲ್ಲಿ ಅಂದಾಜು 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆ ಯನ್ನು ಶಾಸಕ ಭರತ್ ಶೆಟ್ಟಿಯವರು ಸೋಮವಾರ ಉದ್ಘಾಟಿಸಿದರು.

ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಉಪಾಧ್ಯಕ್ಷ ವಿಠಲ ಸಾಲಿಯಾನ್, ಮುತ್ತೂರು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ, ಸಣ್ಣ ನೀರಾವರಿ ಇಲಾಖೆಯ ಇಂಜಿನೀಯರ್ ಕೃಷ್ಣಪ್ಪ ಗೌಡ, ಕುಳವೂರು ಗುತ್ತು ಸದಾನಂದ ಶೆಟ್ಟಿ, ಪ್ರಗತಿಪರ ಕೃಷಿಕರಾದ ಪ್ರತಿಭಾ ಹೆಗ್ಡೆ, ಮತ್ತು ಸ್ಥಳೀಯ ಮುಖಂಡರುಗಳು, ಸಾರ್ವಜನಿಕರು ಇದ್ದರು.
