ಗುರುಪುರ : ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ, ರಾಷ್ಟ್ರೀಯ ಹೆದ್ದಾರಿಯ(169) ಹಳೆ ಸೇತುವೆಗೆ ಪರ್ಯಾಯ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಶುಕ್ರವಾರ(ಜೂನ್ 5) ಲೋಕಾರ್ಪಣೆಯಾಗಲಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.gur-june-2-setuve-1

ಅಂದಾಜು 29 ಕೋಟಿ 42 ಲಕ್ಷ ರೂ ವೆಚ್ಚದ ಈ ಸೇತುವೆ ಕಾಮಗಾರಿ 2018ರ ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಇದರಲ್ಲಿ ಏಳು ಅಂಕಣಗಳಿವೆ. ಸೇತುವೆಯ ಎರಡೂ ಪಾಶ್ರ್ವದಲ್ಲಿ ಪಾದಚಾರಿಗಳಿಗೆ ನಡೆದಾಡಲು ವ್ಯವಸ್ಥೆ ಹಾಗೂ ಎರಡೂ ಕೊನೆಯಲ್ಲಿ 500 ಮೀಟರ್ ಉದ್ದಕ್ಕೆ ರಸ್ತೆ ಅಗಲೀಕರಣ ಮಾಡಲಾಗಿದೆ.

ಸೇತುವೆ ನಿರ್ಮಾಣ ಕಾರ್ಯದ ವೇಳೆ ಕಳೆದ ಒಂದೂವರೆ ವರ್ಷದಲ್ಲಿ ಕಂಪೆನಿಯ ನೂರಾರು ಕಾರ್ಮಿಕರು, ಬೃಹತ್ ಯಂತ್ರೋಪಕರಣಗಳ ಬಳಕೆಯಾಗಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯ ಸುಧಾಕರ ಶೆಟ್ಟಿ ಈ ಕಾಮಗಾರಿ ಯಶಸ್ವಿಯಾಗಿ ಮುಗಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವ್ಯಾಪ್ತಿ ಪ್ರದೇಶದ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಕಂಪೆನಿಯ ಪ್ರಧಾನ ಇಂಜಿನಿಯರ್ ಶಿವಸುಬ್ರಹ್ಮಣ್ಯ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *