ಬಂಟ್ವಾಳ: ಲಾಕ್ ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿಸಿ ಬಸ್ ಮಂಗಳವಾರ ಸಂಚಾರವನ್ನು ಆರಂಭಿಸಿದೆಯಾದರೂ, ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಿದೆ. ಬಿ.ಸಿ.ರೋಡಿನಿಂದ ಮಂಗಳೂರಿಗೆ ಟಿಕೆಟ್ ನ ಮೂಲದರದ ಬದಲಿಗೆ ದುಪ್ಪಟ್ಟು ವಸೂಲಿ ಮಾಡಲಾಗಿದೆ. ಬಿ.ಸಿ.ರೋಡಿನಿಂದ ಮಂಗಳೂರಿಗೆ 39 ರೂ.ಪಡೆಯಲಾಗಿದ್ದು,ಚಿಲ್ಲರೆ ಅಭಾವದ ಹಿನ್ನಲೆಯಲ್ಲಿ ಪೂರ್ತಿ 40 ರೂ.ವನ್ನು ವಸೂಲಿ ಮಾಡಿ ಪ್ರಯಾಣಿಕನ ಕಿಸೆಗೆ ಕತ್ತರಿ ಹಾಕಲಾಗಿದೆ.
ಹಾಗೆಯೇ ಕಲ್ಲಡ್ಕದಿಂದ ಮಂಗಳೂರಿಗೆ ಮೂಲದರ ಬಿಟ್ಟು 42 ರೂ.ವನ್ನು ವಸೂಲಿ ಮಾಡಲಾಗಿದೆ.ಒಂದೆಡೆ ಕೆಲಸವಿಲ್ಲದೆ ಕಿಸೆಯಲ್ಲಿಯು ಕಾಸಿಲ್ಲದೆ ಜನ ಕಂಗಾಲಾಗಿದ್ದರೆ.ಇತ್ತ ಕೆಎಸ್ ಆರ್ ಟಿಸಿ ದುಬಾರಿ ದರ ವಸೂಲಿ ಮಾಡಿ ಜನರಿಂದ ಹಗಲು ದರೋಡೆಗೆ ಇಳಿದಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪುನರಾರಂಭಿಸುವ ನಿಟ್ಟಿನಲ್ಲಿ ಸರಕಾರ ಹಸಿರು ನಿಶಾನೆ ತೋರಿದೆ.
ಆದರೆ ಪ್ರಯಾಣ ದರ ಏರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರೂ,ಲಾಕ್ ಡೌನ್ ಬಳಿಕ ಸರಕಾರಿ ಬಸ್ ನಲ್ಲಿ ಪ್ರಯಾಣವೇ ದುಬಾರಿಯಾಗಿದೆ ಎಂಬುದು ಟಿಕೆಟ್ ದರ ಹಠಾತ್ ಏರಿಕೆಯಂತು ಖಾತ್ರಿಪಡಿಸಿದೆ. ಈ ಬಸ್ ದರ ಕಂಡು ಪ್ರಯಾಣಿಕರು ಹೌಹಾರಿದ್ದಂತೂ ಸುಳ್ಳಲ್ಲ….!
