ಬಂಟ್ವಾಳ:  ಕೊರೋನ ಸೋಂಕು ದೃಢಪಟ್ಟು  ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ರ  ಬಾಲಕಿ   ಗುಣಮುಖರಾಗಿ ಆಸ್ಪತ್ರೆಯಿಂದ ಬುಧವಾರ ಡಿಸ್ಚಾಜ್ ೯ ಆಗಿ ಮನೆಗೆ ತಲುಪಿದ್ದು , ಬಂಟ್ವಾಳ ಜನತೆ ನಿರಾಳರಾದರೆ,ಮನೆಮಂದಿಯು ನಿಟ್ಟುಸಿರು ಬಿಟ್ಟಿದ್ದಾರೆ. ಇವರ ತಾಯಿ 45 ರ ಹರೆಯದ ಗೃಹಿಣಿ  ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ಸಂದರ್ಭ ಇವರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು ಎ.19 ರಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಬಳಿಕ ಬಾಲಕಿಯ ಅಜ್ಜಿ ಕೂಡ ಕೊರೋನ ಸೋಂಕು ಕಣಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬಾಲಕಿಯ ತಂದೆ ಹಾಗೂ ಅಣ್ಣ ಕೆಲದಿನಗಳ ಹಿಂದೆಯೇ ಎನ್ ಐ ಟಿ ಕೆ ಕ್ವಾರಂಟೈನ್ ನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದು, ಇದೀಗ ಬಾಲಕಿಯು  ಗುಣಮುಖರಾಗಿ  ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾಜ್ ೯ ಆಗಿ ಮಧ್ಯಾಹ್ನದ ವೇಳೆ ಮನೆಗೆ ತಲುಪಿದ್ದು,ಮನೆಮಂದಿ ಸದ್ಯ ನಿಟ್ಟುಸಿರು ಬಿಟ್ಟಿದ್ದಾರಲ್ಲದೆ ಇವರ ವಠಾರದಲ್ಲಿಯು ಸಂತಸದ ವಾತಾವರಣ ಕಾಣಿಸಿದೆ.

ಸದ್ಯ ಬಂಟ್ವಾಳ ಕಸ್ಬಾ ಗ್ರಾಮದ ಶಾಲಾರಸ್ತೆಯಲ್ಲಿರುವ ಒಂದೇ ಮನೆಯ ಮೂವರಿಗೆ ಕೋವಿಡ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಮುಂದುವರಿದೆ. ಉಳಿದಂತೆ ಕ್ವಾರೆಂಟೈನ್ ನಲ್ಲಿದ್ದವರು ಬಿಡುಗಡೆಯಾಗಿ ಮನೆಗೆ ಸೇಫ್ ಆಗಿ ಮನೆಗೆ ಈಗಾಗಲೇ ಬಂದಿದ್ದಾರೆ. ಬಂಟ್ವಾಳ ರಥ ಬೀದಿ ವ್ಯಾಪ್ತಿಯಲ್ಲಿ  ಸೀಲ್ ಡೌನ್ ಆಗಿ 28  ದಿನಗಳು ಕಳೆದರೂ ಇನ್ನು ಸೀಲ್ ಡೌನ್ ಮುಕ್ತಗೊಳಿಸದ ಬಗ್ಗೆ  ಈ ಭಾಗದ ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ  ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *