ಬಂಟ್ವಾಳ: ಕೆಲಸದ ನಿಮಿತ್ತ ಬಂಟ್ವಾಳ ತಾಲೂಕಿನ ವಿವಿಧ ಭಾಗಕ್ಕೆ ಆಗಮಿಸಿದ್ದ ಮಧ್ಯಪ್ರದೇಶ ಮೂಲದ ಕಾರ್ಮಿಕರನ್ನು ಮಂಗಳವಾರ ಸಂಜೆ ಬಂಟ್ವಾಳ ತಾಲೂಕಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ಮೂಲಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕಳುಹಿಸಲಾಯಿತು.
ಅಲ್ಲಿ ಕೆಲವು ವಲಸೆ ಕಾರ್ಮಿಕರನ್ನು ಬಸ್ಸು ಹತ್ತಿಸಿ ಬೆಂಗಳೂರು ಮೂಲಕವಾಗಿ ರೈಲಿನಲ್ಲಿ ಊರಿಗೆ ತೆರಳುವ ವ್ಯವಸ್ಥೆ ಮಾಡಲಾಯಿತು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರ ನಿರ್ದೇಶನದಂತೆ ಬಿ.ಸಿ.ರೋಡು ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ 51 ಮಂದಿ ಹಾಗೂ ವಿಟ್ಲದಿಂದ 46 ಮಂದಿಯನ್ನು ಬಸ್ಸಿನ ಮೂಲಕ ಪುತ್ತೂರಿಗೆ ಕಳುಹಿಸಲಾಯಿತು.

ಬಂಟ್ವಾಳ ತಾಲೂಕು ಕಚೇರಿ ಶಿರಸ್ತೇದಾರ್ ರಾಜೇಶ್ ನಾಯ್ಕ್ ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ, ನಗರ ಸಬ್ ಇನ್ಸ್ ಪೆಕ್ಟರ್ ಅವಿನಾಶ್, ಬಂಟ್ವಾಳ ತಾಲೂಕು ಕಚೇರಿಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದರು
